ಕೊನೆಗೂ ಟೀಂ ಇಂಡಿಯಾಕ್ಕೆ ಬ್ರೇಕ್ ಕೊಟ್ಟ ಅಶ್ವಿನ್

ಶನಿವಾರ, 27 ನವೆಂಬರ್ 2021 (10:20 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಗೂ ಎದುರಾಳಿಗಳ ಮೊದಲ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದೆ.

ಕಿವೀಸ್ ಓಪನರ್ ವಿಲ್ ಯಂಗ್ 89 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಔಟಾಗಿ ಪೆವಿಲಿಯನ್ ಸೇರಿದ್ದಾರೆ. ನಿನ್ನೆ ಅಜೇಯರಾಗುಳಿದಿದ್ದ ಯುಂಗ್ ಇಂದು ವಿಕೆಟ್ ಕೀಪರ್ ಶ್ರೀಕರ್ ಭರತ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.

ಇದರೊಂದಿಗೆ ನ್ಯೂಜಿಲೆಂಡ್ ನ ದಾಖಲೆಯ ಓಪನಿಂಗ್ ಜೊತೆಯಾಟ ಮುರಿದುಬಿದ್ದಿದೆ. ಕಿವೀಸ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ