ಕಾನ್ಪುರ ಟೆಸ್ಟ್: ಬೇಕು ಬೇಕು ಟೀಂ ಇಂಡಿಯಾಗೆ ವಿಕೆಟ್ ಬೇಕು

ಶನಿವಾರ, 27 ನವೆಂಬರ್ 2021 (09:19 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಂದು ನಿರ್ಣಾಯಕ ದಿನ.

ನಿನ್ನೆ ಮೊದಲ ಇನಿಂಗ್ಸ್ ನಲ್ಲಿ 129 ರನ್ ಗಳಿಸಿ ವಿಕೆಟ್ ನಷ್ಟವಿಲ್ಲದೇ ದಿನದಾಟ ಮುಗಿಸಿದ್ದ ನ್ಯೂಜಿಲೆಂಡ್ ಭಾರತದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು 216 ರನ್ ಗಳಿಸಿದರೆ ಸಾಕು.

ಹೀಗಾಗಿ ಟೀಂ ಇಂಡಿಯಾಗೆ ಇಂದು ಬೆಳಗಿನ ಅವಧಿಯಲ್ಲಿ ವಿಕೆಟ್ ಗಳಿಸುವ ಅನಿವಾರ್ಯತೆ. ಒಂದು ವೇಳೆ ಬೆಳಗಿನ ಅವಧಿಯಲ್ಲಿ ನ್ಯೂಜಿಲೆಂಡ್ ವಿಕೆಟ್ ಕಬಳಿಸಲು ಸಾಧ್ಯವಾಗದೇ ಹೋದರೆ ಬೃಹತ್ ಮುನ್ನಡೆ ಪಡೆಯುವುದು ಖಚಿತ. ಇನ್ನು ಎರಡು ದಿನದ ಆಟ ಬಾಕಿ ಇರುವುದರಿಂದ ಭಾರತಕ್ಕೆ ಇದು ದುಬಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ