ಕೊನೆಗೂ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದ ಸೆಹ್ವಾಗ್
ಶುಕ್ರವಾರ, 2 ಜೂನ್ 2017 (13:09 IST)
ನವದೆಹಲಿ: ಸಾಕಷ್ಟು ವಿವಾದಗಳ ನಡುವೆಯೂ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅರ್ಜಿ ಹಾಕಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ನಂತರ ಅನಿಲ್ ಕುಂಬ್ಳೆ ಗುತ್ತಿಗೆ ಅವಧಿ ಕೊನೆಗೊಳ್ಳಲಿದೆ. ಕೊಹ್ಲಿ-ಕುಂಬ್ಳೆ ನಡುವೆ ಭಿನ್ನಾಭಿಪ್ರಾಯಗಳಿವೆ ಮತ್ತು ಸಣ್ಣ ಪುಟ್ಟ ವಿಷಯಕ್ಕೂ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಮಂಡಳಿಯನ್ನು ಸಂಪರ್ಕಿಸುತ್ತಾರೆ ಎನ್ನುವ ಕಾರಣಕ್ಕೆ ಕುಂಬ್ಳೆ ಮೇಲೆ ಬಿಸಿಸಿಐಗೆ ಅಸಮಾಧಾನವಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಅವರನ್ನು ಮತ್ತೆ ಕೋಚ್ ಆಗಿ ಮುಂದುವರಿಸುವುದು ಅನುಮಾನ. ಹಾಗಾಗಿ ಸ್ವತಃ ಬಿಸಿಸಿಐ ಸೆಹ್ವಾಗ್ ಗೆ ಅರ್ಜಿ ಹಾಕಲು ಸೂಚಿಸಿತ್ತು ಎಂದು ವರದಿಗಳು ಬಂದಿದ್ದವು. ಆರಂಭದಲ್ಲಿ ಕುಂಬ್ಳೆ ಜತೆ ಸ್ಪರ್ಧಿಸಲು ವೀರೂ ಹಿಂದೇಟು ಹಾಕಿದ್ದರೂ, ಇದೀಗ ಅರ್ಜಿ ಹಾಕುವ ಮನಸ್ಸು ಮಾಡಿದ್ದಾರೆ.
ಸೆಹ್ವಾಗ್ ಜತೆಗೆ ಕರ್ನಾಟಕದ ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್ ಕೂಡಾ ಅರ್ಜಿ ಗುಜರಾಯಿಸಿದ್ದರು. ಹಾಗಿದ್ದರೂ, ಬಿಸಿಸಿಐಗೆ ಟಾಮ್ ಮೂಡಿ ಮೇಲೆ ಹೆಚ್ಚಿನ ಒಲವಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ