ಪ್ಲೆಸಿಸ್ ಅಜೇಯ 79: ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾಗೆ ಸೋಲು

ಸೋಮವಾರ, 6 ಜುಲೈ 2015 (13:41 IST)
ನಾಯಕ ಪಾಫ್ ಡು ಪ್ಲೆಸಿಸ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ  ಬಾಂಗ್ಲಾದೇಶದ ವಿರುದ್ಧ ಮೊದಲ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 52 ರನ್ ಜಯಗಳಿಸಿದೆ. ಪ್ರವಾಸಿ ತಂಡದ ಆರಂಭದ ಕುಸಿತದಿಂದ ಚೇತರಿಸಿಕೊಳ್ಳಲು ನೆರವು ನೀಡಿದ ಡು ಪ್ಲೆಸಿಸ್ 61 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿದ್ದಾರೆ. ಟ್ವೆಂಟಿ 20 ಪಂದ್ಯದಲ್ಲಿ ಇದು ಅವರ 6ನೇ ಅರ್ಧಶತಕವಾಗಿದ್ದು, ಅದರಲ್ಲಿ 8 ಬೌಂಡರಿಗಳು ಸೇರಿವೆ.
 
 ಆಫ್ ಸ್ಪಿನ್ನರ್ ಜೆಪಿ ಡುಮಿನಿ, ಮಧ್ಯಮ ವೇಗಿ ಡೇವಿಡ್ ವೈಸ್ ಮತ್ತು ವೇಗಿ ಕಾಗಿಸೊ ರಬಾಡಾ ತಲಾ ಎರಡು ವಿಕೆಟ್ ಕಬಳಿಸಿ ಬಾಂಗ್ಲಾದೇಶ 96 ರನ್‌ಗೆ ಆಲೌಟ್ ಆಗುವುದಕ್ಕೆ ನೆರವಾದರು.  ಶಕೀಬ್ ಅಲ್ ಹಸನ್ ಮಾತ್ರ 30 ಎಸೆತಗಳಲ್ಲಿ 26 ರನ್‌ನೊಂದಿಗೆ ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು. ಬಾಂಗ್ಲಾದೇಶ 13 ರನ್ ಸ್ಕೋರ್ ಆಗಿದ್ದಾಗಲೇ ತನ್ನ ಇಬ್ಬರೂ ಓಪನರ್‌ಗಳನ್ನು ಕಳೆದುಕೊಂಡಿತು.

ಆದರೆ ಎರಡನೇ ವಿಕೆಟ್‌ಗೆ ಶಕೀಬ್ ಮತ್ತು ಮುಶ್ಫಿಕುರ್ ರಹೀಮ್ 37 ರನ್ ಕಲೆಹಾಕಿದರು. ಡುಮಿನಿ ರಹೀಮ್ ಮತ್ತು ಸಬ್ಬೀರ್ ರೆಹ್ಮಾನ್ ಅವರನ್ನು ಮತ್ತು ಎಡಗೈ ಸ್ಪಿನ್ನರ್ ಆರಾನ್ ಫಾಂಗಿಸೋ ನಾಸಿರ್ ಹುಸೇನ್ ಅವರನ್ನು ಔಟ್ ಮಾಡಿದ ಬಳಿಕ ಬಾಂಗ್ಲಾದೇಶವು 2-50ರಿಂದ 5 ವಿಕೆಟ್‌ಗೆೋ 57 ರನ್ ಗಳಿಸಿ ಪತನಗೊಂಡಿತು.
 ಇದಕ್ಕೆ ಮುಂಚೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಸ್ಕೋರ್ ಹೆಚ್ಚಿಸಲು ದಕ್ಷಿಣ ಆಫ್ರಿಕಾ ತಿಣುಕಾಡಿತು.

ಬಾಂಗ್ಲಾದೇಶ ಎರಡೂ ಕೊನೆಗಳಿಂದ ಸ್ಪಿನ್ನರ್‌ಗಳನ್ನು ಆಡಿಸಿ ಮೊದಲ ಓವರಿನಲ್ಲೇ ಸ್ಪಿನ್ನರ್ ಅರಾಫತ್ ಸನ್ನಿ ಡಿ ವಿಲಿಯರ್ಸ್ ಅವರನ್ನು 2 ರನ್‌ಗಳಾಗಿದ್ದಾಗ ಔಟ್ ಮಾಡಿದರು. ಬಳಿಕ ಪ್ಲೆಸಿಸ್ ಮತ್ತು ರೊಸೌವ್ ಅವರ ಉತ್ತಮ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 148 ಸಾಧಾರಣ ಮೊತ್ತವನ್ನು ಗಳಿಸಿತು.  
 

ವೆಬ್ದುನಿಯಾವನ್ನು ಓದಿ