ಐದು ಎನಗೆ ಉಳಿದದ್ದು ನಿನಗೆ ಎಂದರು ಆರ್.ಅಶ್ವಿನ್

ಶುಕ್ರವಾರ, 9 ಡಿಸೆಂಬರ್ 2016 (11:41 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದ ಆಟದ ಊಟದ ವಿರಾಮದ ವೇಳೆಗೆ 385 ರನ್ ಗಳಿಗೆ ಇಂಗ್ಲೆಂಡ್ ನ 8 ವಿಕೆಟ್ ಬಿದ್ದಿದೆ. ಇದರಲ್ಲಿ ಸ್ಪಿನ್ನರ್ ಗಳದ್ದೇ ಪಾರಮ್ಯ.

ಐದು ಬೌಲರ್ ಗಳು ಭಾರತದ ಪರ ಬೌಲಿಂಗ್ ಮಾಡಿದ್ದರು. ಅವರಲ್ಲಿ ವಿಕೆಟ್ ಕಿತ್ತವರು ಎರಡೇ ಮಂದಿ. ಐದು ವಿಕೆಟ್ ಆರ್.ಅಶ್ವಿನ್ ಪಾಲಾದರೆ ಉಳಿದವು ರವೀಂದ್ರ ಜಡೇಜಾ ಪಾಲಾಯಿತು.  ಇಂದು ಬೆಳಿಗ್ಗೆಯೇ ಒಂದು ವಿಕೆಟ್ ಕೀಳುವ ಮೂಲಕ ಅಶ್ವಿನ್ ಅತೀ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದರು. ಅವರೀಗ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಇದ್ದಾರೆ.

ಆದರೂ ಭಾರತದ ಪರಿಸ್ಥಿತಿಯೇನೂ ಉತ್ತಮವಾಗಿಲ್ಲ. ಇಂಗ್ಲೆಂಡ್ ಈಗಾಗಲೇ ಉತ್ತಮ ಮೊತ್ತವನ್ನೇ ಪೇರಿಸಿದೆ. ಸಮಯ ಕಳೆದಂತೆ ಪಿಚ್ ಸಂಪೂರ್ಣ ತಿರುವು ಪಡೆಯುತ್ತಿದೆ. ಬ್ಯಾಟಿಂಗ್ ಕಷ್ಟವಾಗುತ್ತಿದೆ. ಹೀಗಾಗಿ ಭಾರತಕ್ಕೆ ರನ್ ಚೇಸ್ ಮಾಡಲು ಕಷ್ಟವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ