ವಿರಾಟ್ ಕೊಹ್ಲಿ ಯಾರೆಂದೇ ಗೊತ್ತಿಲ್ಲ ಎಂದ ಫುಟ್ಬಾಲರ್ ರೊನಾಲ್ಡೊ

Krishnaveni K

ಶುಕ್ರವಾರ, 12 ಜನವರಿ 2024 (08:20 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದರೆ ಇಡೀ ವಿಶ‍್ವಕ್ಕೇ ಗೊತ್ತು. ಆದರೆ ಫುಟ್ಬಾಲರ್ ರೊನಾಲ್ಡೊ ಮಾತ್ರ ನನಗೆ ವಿರಾಟ್ ಕೊಹ್ಲಿ ಯಾರೆಂದೇ ಗೊತ್ತಿಲ್ಲ ಎಂದು ಸುದ್ದಿಯಾಗಿದ್ದಾರೆ.

ಯೂ ಟ್ಯೂಬ್ ವಾಹಿನಿ ಸಂದರ್ಶನದ ವೇಳೆ ರೊನಾಲ್ಡೊಗೆ ವಿರಾಟ್ ಕೊಹ್ಲಿ ಯಾರು ಗೊತ್ತಾ ಎಂದು ಪ್ರಶ್ನೆ ಕೇಳಲಾಯಿತು. ಆಗ ರೊನಾಲ್ಡೊ ‘ಯಾರು?’ ಎಂದು ಕೇಳಿದ್ದಾರೆ. ಸಂದರ್ಶಕ ‘ಭಾರತೀಯ ವಿರಾಟ್ ಕೊಹ್ಲಿ’ ಎಂದಾಗ ರೊನಾಲ್ಡೊ ‘ಇಲ್ಲ’ ಎಂದಿದ್ದಾರೆ.

ರೊನಾಲ್ಡೊ ಉತ್ತರ ಸಂದರ್ಶಕನಿಗೂ ಅಚ್ಚರಿ ಉಂಟು ಮಾಡಿತ್ತು. ‘ನಿಜವಾಗಿಯೂ ನಿಮಗೆ ವಿರಾಟ್ ಕೊಹ್ಲಿ ಗೊತ್ತಿಲ್ಲವೇ?’ ಎಂದಾಗ ರೊನಾಲ್ಡೊ ‘ಆತ ಕ್ರೀಡಾಳುವೇ?’ ಎಂದಿದ್ದಾರೆ. ‘ಹೌದು ಅವರು ಕ್ರಿಕೆಟಿಗ’ ಎಂದು ಸಂದರ್ಶಕರು ಹೇಳಿದಾಗ ‘ಓಹ್ ಹೌದಾ.. ಅವರು ಇಲ್ಲಿ ಅಷ್ಟೊಂದು ಜನಪ್ರಿಯರಲ್ಲ’ ಎಂದಿದ್ದಾರೆ.

ಬಳಿಕ ಸಂದರ್ಶಕರು ತಮ್ಮ ಮೊಬೈಲ್ ನಲ್ಲಿ ವಿರಾಟ್ ಕೊಹ್ಲಿ ಫೋಟೋ ತೋರಿಸಿದ್ದಾರೆ. ಅದನ್ನು ನೋಡಿದ ರೊನಾಲ್ಡೊ ‘ಇವರನ್ನು ಗೊತ್ತು’ ಎಂದಿದ್ದಾರೆ.

2014 ರಲ್ಲಿ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನನಗೆ ಸಚಿನ್ ತೆಂಡುಲ್ಕರ್ ಯಾರೆಂದೇ ಗೊತ್ತಿಲ್ಲ ಎಂದಿದ್ದರು. ಸೆರೆನಾ ಸೊಕ್ಕು ಮುರಿಯಲು ಅಂದು ಟ್ವಿಟರಿಗರು ಸೆರೆನಾ ವಿಲಿಯಮ್ಸ್ ಎಂದರೆ ಯಾರು ಎಂದು ಅಭಿಯಾನವನ್ನೇ ಶುರು ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ