ಶೇನ್ ವಾರ್ನ್ ಬೌಲಿಂಗ್‌ಗೆ ಸವಾಲು : ಲಯೊನ್ ಶತಮಾನದ ಸ್ಪಿನ್ ಎಸೆತ

ಗುರುವಾರ, 9 ಜೂನ್ 2016 (13:14 IST)
ಸ್ಪಿನ್ನರ್ ಬೌಲಿಂಗ್‌ನಲ್ಲಿ ಮೂಡಿಬಂದ ಅತೀ ಶ್ರೇಷ್ಟ ಎಸೆತ ಯಾವುದಿರಬಹುದು? 1993ರಲ್ಲಿ ಶೇನ್ ವಾರ್ನ್ ಮೈಕ್ ಗ್ಯಾಟಿಂಗ್ ಅವರಿಗೆ ಬೌಲ್ ಮಾಡಿದ ಎಸೆತ ಅತೀ ಶ್ರೇಷ್ಟ ಬೌಲಿಂಗ್ ಎಂದು ಪರಿಗಣಿಸಬಹುದು.

ಆದರೆ ನಾಥನ್ ಲಯೋನ್ ಬೌಲಿಂಗ್‌ನಿಂದ ಹೊಮ್ಮಿದ ಸ್ಪಿನ್ ನೋಡಿದಾಗ ನೀವು ಎರಡನೇ ಬಾರಿ ಯೋಚಿಸಬೇಕಾಗುತ್ತದೆ.

ಲಯೋನ್ ಅವರು ಗ್ರೇಮ್ ಸ್ವಾನ್‌ಗೆ ಎಸೆದ ಎಸೆತವು ಪಿಚ್ ಮಧ್ಯಭಾಗದಲ್ಲಿ ಬಿದ್ದು ತೀವ್ರ ಸ್ಪಿನ್ ತೆಗೆದುಕೊಂಡು ಲೆಗ್ ಸ್ಲಿಪ್‌ನಲ್ಲಿದ್ದ ಫೀಲ್ಡರ್ ಕೈಗೆ ನೇರವಾಗಿ ತಲುಪಿತ್ತು. ಪಿಚ್ ಮಧ್ಯದಲ್ಲಿ ನೆಲದ ಸೀಳಿಗೆ ಚೆಂಡು ತಾಗಿ ಅಷ್ಟೊಂದು ತೀವ್ರ ಸ್ಪಿನ್‌ಗೆ ಚೆಂಡು ತಿರುಗಿತ್ತು. 

 
 

ವೆಬ್ದುನಿಯಾವನ್ನು ಓದಿ