IND vs ENG: ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದ ರವೀಂದ್ರ ಜಡೇಜಾ

Krishnaveni K

ಗುರುವಾರ, 3 ಜುಲೈ 2025 (17:28 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ರವೀಂದ್ರ ಜಡೇಜಾ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.
 

ನಿನ್ನೆಯ ದಿನಕ್ಕೆ 5 ವಿಕೆಟ್ ಕಳೆದುಕೊಂಡು 310 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತ ಇಂದೂ ಮೊದಲ ಅವಧಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ನಿನ್ನೆ ಅಜೇಯರಾಗುಳಿದಿದ್ದ ನಾಯಕ ಶುಬ್ಮನ್ ಗಿಲ್ ಇದೀಗ 166 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುತ್ತಿದ್ದ ರವೀಂದ್ರ ಜಡೇಜಾ ಶತಕದ ನಿರೀಕ್ಷೆಯಲ್ಲಿದ್ದರು.

ಆದರೆ 89 ರನ್ ಗಳಿಸಿದ್ದಾಗ ಟಂಗ್ ಬೌಲಿಂಗ್ ನಲ್ಲಿ ಜೆಮಿ ಸ್ಮಿತ್ ಗೆ ಕ್ಯಾಚಿತ್ತು ಶತಕ ಪೂರ್ತಿ ಮಾಡಲಾಗದೇ ನಿರಾಸೆ ಅನುಭವಿಸಿದರು. ಇದಕ್ಕೆ ಮೊದಲು ಯಶಸ್ವಿ ಜೈಸ್ವಾಲ್ ಕೂಡಾ ಇದೇ ಇನಿಂಗ್ಸ್ ನಲ್ಲಿ ಶತಕದ ಅಂಚಿನಲ್ಲಿ ಎಡವಿದ್ದರು.

ಆದರೆ ಆರನೇ ವಿಕೆಟ್ ಗೆ ಜಡೇಜಾ-ಗಿಲ್ ಜೋಡಿ 200 ಪ್ಲಸ್ ಜೊತೆಯಾಟವಾಡಿ ಭಾರತವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ಯಿತು. ಇತ್ತೀಚೆಗಿನ ವರದಿ ಬಂದಾಗ ಭಾರತ 6 ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ