ಸ್ಟಂಪಿಂಗ್ ಶತಕಕ್ಕೆ ಸಿದ್ಧವಾದ ಧೋನಿ: 300ನೇ ಪಂದ್ಯದಲ್ಲಿ ಮತ್ತೆರಡು ದಾಖಲೆ ನಿರೀಕ್ಷೆ

ಬುಧವಾರ, 30 ಆಗಸ್ಟ್ 2017 (13:04 IST)
ಶ್ರೀಲಂಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಆಯ್ಕೆ ಸಮಿತಿಯಿಂದ ಪರೋಕ್ಷ ಎಚ್ಚರಿಕೆ ಪಡೆದಿದ್ದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ, ಎರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಆಟ ಪ್ರದರ್ಶಿಸುವ ಮೂಲಕ ಮತ್ತೆ ಭರವಸೆ ಮೂಡಿಸಿದ್ಧಾರೆ. ಇದರ ಜೊತೆಗೆ ನಾಳೆ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.
 

ಹೌದು, ನಾಳೆ ಶ್ರೀಲಂಕಾ ವಿರುದ್ಧ ಧೋನಿ 300ನೇ ಏಕದಿನ ಪಂದ್ಯವನ್ನಾಡುತ್ತಿದ್ದಾರೆ.  ಇದರ ಜೊತೆಗೆ ಎರಡು ದಾಖಲೆಗಳನ್ನ ಬರೆಯಲಿದ್ದಾರೆ. ಬ್ಯಾಟಿಂಗ್`ನಲ್ಲಷ್ಟೇ ಅಲ್ಲದೆ ವಿಕೆಟ್ ಹಿಂದೆ ಸ್ಟಂಪಿಂಗ್ ಮೂಲಕ ಗಮನ ಸೆಳೆಯುವ ಧೋನಿ ಇದುವರೆಗೆ 99 ಸ್ಟಂಪಿಂಗ್ ಮಾಡಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ ಜೊತೆ 99 ಸ್ಟಂಪ್ ಔಟ್ ಮಾಡಿದ ಅಗ್ರ ಸ್ಥಾನ ಹಂಚಿಕೊಂಡಿರುವ ಧೋನಿ ನಾಳೆ ಮತ್ತೊಂದು ಸ್ಟಂಪಿಂಗ್ ಮಾಡಿದರೆ. 100 ಸ್ಟಂಪ್ ಮಾಡಿದ ಏಕೈಕ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಇದರ ಜೊತೆಗೆ ಅಜೇಯರಾಗಿ ಆಡಿದ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಧೋನಿ ಇದ್ದಾರೆ. ಸದ್ಯ, ಶಾನ್ ಪೊಲಾಕ್ ಮತ್ತು ಚಮಿಂದಾ ವಾಸ್ ಜೊತೆ 72 ಅಜೇಯ ಏಕದಿನ ಪಂದ್ಯವಾಡಿದ ಸ್ಥಾನ ಹಂಚಿಕೊಂಡಿರುವ ಧೋನಿ ನಾಳಿನ ಪಂದ್ಯದಲ್ಲೂ ಅಜೇಯರಾಗುಳಿದರೆ ಹೊಸ ದಾಖಲೆ ಬರೆಯಲಿದ್ದಾರೆ.

ಶ್ರೀಲಂಕಾ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಡುತ್ತಾ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವ ಧೋನಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಇದೇ ಪ್ರದರ್ಶನ ಮುಂದುವರೆದಲ್ಲಿ 2019ರ ವಿಶ್ವಕಪ್ ತಂಡದಲ್ಲೂ ಧೋನಿ ಇರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ