IND vs WI test: ದಿನವಿಡೀ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟಿಗರು
ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಇಂದಿನ ದಿನದ ಹೈಲೈಟ್ಸ್. ಒಟ್ಟು 253 ಎಸೆತ ಎದುರಿಸಿದ ಅವರು 173 ರನ್ ಗಳಿಸುವ ಮೂಲಕ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ ನಾಯಕ ಶುಭಮನ್ ಗಿಲ್ 20 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇಂದು ತಮ್ಮ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕ ಸಿಡಿಸಿದರು. ಈ ಮೂಲಕ 23 ವರ್ಷದೊಳಗಾಗಿ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರರ ಸಾಲಿನಲ್ಲಿ ಸಚಿನ್ ತೆಂಡುಲ್ಕರ್ ನಂತರದ ಸ್ಥಾನ ಪಡೆದರು.
ಇದಕ್ಕೆ ಮೊದಲು ಕೆಎಲ್ ರಾಹುಲ್ 38 ರನ್ ಗಳಿಗೆ ಔಟ್ ಆಗಿದ್ದರೆ, ಮೂರನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ 87 ರನ್ ಗಳಿಗೆ ಔಟಾಗಿ ಶತಕ ವಂಚಿತರಾದರು. ಸಾಯಿ ಸುದರ್ಶನ್ ಮತ್ತು ಜೈಸ್ವಾಲ್ ಎರಡನೇ ವಿಕೆಟ್ ಗೆ 197 ರನ್ ಗಳ ಜೊತೆಯಾಟವಾಡಿದರು. ಇಂದಿನ ದಿನವಿಡೀ ಟೀಂ ಇಂಡಿಯಾ ಬ್ಯಾಟಿಗರು ಆರಾಮವಾಗಿಯೇ ವಿಂಡೀಸ್ ಬೌಲಿಂಗ್ ಎದುರಿಸಿದ್ದರು. ಒಂದು ರೀತಿಯಲ್ಲಿ ಇದು ಆಸ್ಟ್ರೇಲಿಯಾ ಸರಣಿಗೆ ಅಭ್ಯಾಸ ನಡೆಸಿದಂತಿತ್ತು.