ಯುವ ವೇಗಿಗಳಿಗೆ ಮಾಜಿ ಪಾಕ್ ನಾಯಕ ವಾಸಿಂ ಅಕ್ರಂ ತರಬೇತಿ

ಗುರುವಾರ, 30 ಜುಲೈ 2015 (19:59 IST)
ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ವೇಗದ ಬೌಲರ್ ವಾಸಿಮ್ ಅಕ್ರಂ ಅವರಿಗೆ ಕರಾಚಿಯಲ್ಲಿ 12 ದಿನಗಳ ಶಿಬಿರದಲ್ಲಿ ದೇಶದ ಅತ್ಯುತಕ್ತಮ ಯುವ ವೇಗಿಗಳಿಗೆ ತರಬೇತಿ ನೀಡುವ ಕಾರ್ಯವನ್ನು ವಹಿಸಲಾಗಿದೆ.  
 
ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಗಸ್ಟ್ ಒಂದರಿಂದ ಶಿಬಿರದಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 12 ಯುವ ವೇಗಿಗಳನ್ನು ಹೆಸರಿಸಿದೆ. 
ನಾಲ್ಕು ಕೇಂದ್ರಗಳಲ್ಲಿ ಈ ತಿಂಗಳು ನಡೆದ ಸರಣಿ ಪರೀಕ್ಷೆಗಳ ಬಳಿಕ  12 ಜನ ಯುವವೇಗಿಗಳನ್ನು ಆಯ್ಕೆಮಾಡಲಾಗಿದೆ. 
 
 ಇಡೀ ಪ್ರತಿಭಾ ಬೇಟೆ ಯೋಜನೆಯನ್ನು ಪ್ರಾಯೋಜಕತ್ವಕ್ಕೆ ಪ್ರಮುಖ ವಿದ್ಯುನ್ಮಾನ ದೈತ್ಯ ಕಂಪನಿಯೊಂದು ಒಪ್ಪಿಗೆ ಸೂಚಿಸಿದ ಬಳಿಕ ಅಕ್ರಂ ಅವರ ಸೇವೆಯನ್ನು ಬಳಸಿಕೊಳ್ಳಲು ಪಿಸಿಬಿ ನಿರ್ಧರಿಸಿತು
.
ಮಂಡಳಿಯ ಜೊತೆ ಹಳಸಿದ ಸಂಬಂಧ ಹೊಂದಿರುವ ಅಕ್ರಂ ಪ್ರಾಯೋಜಕರಿಂದ ನೇರವಾಗಿ ಸಂಭಾವನೆಯನ್ನು ಸ್ವೀಕರಿಸುತ್ತಾರೆಂದು ಮೂಲಗಳು ಹೇಳಿವೆ. 
ಇತ್ತೀಚೆಗೆ ತಾನೆ ಅಕ್ರಂ ರಾಷ್ಟ್ರೀಯ ಆಯ್ಕೆದಾರರನ್ನು ಮತ್ತು ಟೀಂ ಮ್ಯಾನೇಜ್‌ಮೆಂಟನ್ನು ಎಡಗೈ ವೇಗಿ ಜುನೈದ್ ಖಾನ್ ಮತ್ತು ಯೂನಿಸ್ ಖಾನ್ ಅವರನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಟೀಕಿಸಿದ್ದರು. 
 

ವೆಬ್ದುನಿಯಾವನ್ನು ಓದಿ