ಸ್ಪರ್ಧಾತ್ಮಕ ಪಿಚ್ ನಲ್ಲಿ ಆಡುವುದರಲ್ಲಿ ನಿಜವಾದ ಮಜಾ ಇದೆ ಎಂದ ಹರ್ಭಜನ್ ಸಿಂಗ್

ಶುಕ್ರವಾರ, 11 ನವೆಂಬರ್ 2016 (08:55 IST)
ನವದೆಹಲಿ:ಸ್ಪರ್ಧಾತ್ಮಕ ಪಿಚ್ ನಲ್ಲಿ ಆಡುವುದರಲ್ಲಿ ನಿಜವಾದ ಮಜಾ ಇರುತ್ತದೆ ಎಂದು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಅವರು ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್ ನಿಂದಾಗಿ ಸ್ಪಿನ್ನರ್ ಗಳು ಹೆಚ್ಚು ವಿಕೆಟ್ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದರು.

“ನೀವು ವೈವಿದ್ಯಮಯ ಎಸೆತ ಎಸೆಯಬೇಕು. ಹೊಸದನ್ನು ಮಾಡಲು ಪ್ರಯತ್ನಿಸಬೇಕು. ಕಷ್ಟಪಟ್ಟು ವಿಕೆಟ್ ಗಳಿಸಬೇಕು. ಆಗಲೇ ಒಬ್ಬ ಬೌಲರ್ ಆಗಿ ನೀವು ಬೆಳೆಯಬಹುದು”  ಎಂದು ಭಜಿ ಹೇಳಿದ್ದಾರೆ.

ಅಲ್ಲದೆ ಇಂಗ್ಲೆಂಡ್ ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ ಅವರು “ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಚೆನ್ನಾಗಿ ಆಡಿದರು. ಆದರೆ ಭಾರತೀಯ ಬೌಲರ್ ಗಳನ್ನು ಕಡೆಗಣಿಸಲಾಗದು. ಎರಡನೇ ಇನಿಂಗ್ಸ್ ನಲ್ಲಿ ಅವರು ಪುಟಿದೇಳಬಹುದು. ಅಶ್ವಿನ್ ಮತ್ತು ಜಡೇಜಾಗೆ ಆ ಸಾಮರ್ಥ್ಯವಿದೆ” ಎಂದು ಭಜಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ