Funny video: ಕಣ್ಣೆದುರೇ ಇದ್ದರೂ ಚೆಂಡು ಎಲ್ಲಿ ಎಂದು ಮೈದಾನದಲ್ಲಿ ಹುಡುಕಾಡಿದ ಇಶಾನ್ ಕಿಶನ್
ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 245 ಬೃಹತ್ ಗುರಿ ನೀಡಿತ್ತು. ಹಾಗಿದ್ದರೂ ಹೈದರಾಬಾದ್ 18.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.
ಫೀಲ್ಡಿಂಗ್ ವೇಳೆ ಇಶಾನ್ ಕಿಶನ್ ತಮಾಷೆಯ ಕ್ಷಣವೊಂದಕ್ಕೆ ಸಾಕ್ಷಿಯಾದರು. ಪಂಜಾಬ್ ಬ್ಯಾಟಿಗ ಸ್ಟ್ರೈಟ್ ಡ್ರೈವ್ ಹೊಡೆತವೊಂದನ್ನು ಹೊಡೆದರು. ಇದನ್ನು ಡೈವ್ ಹೊಡೆದು ಇಶಾನ್ ಕಿಶನ್ ತಡೆದರು. ಅಲ್ಲಿ ಬಿಳಿ ಮತ್ತು ನೇರಳೆ ಕಲರ್ ನ ಡಿಸೈನ್ ಇತ್ತು.
ಅದರ ಮೇಲೆ ಚೆಂಡು ಬಿದ್ದಿದ್ದರಿಂದ ಇಶಾನ್ ಗೆ ಚೆಂಡು ಕಾಣಿಸಲೇ ಇಲ್ಲ. ಚೆಂಡು ತಡೆದರೂ ಚೆಂಡಿಗಾಗಿ ಹುಡುಕಾಡುತ್ತಿರುವುದು ನೋಡಿ ಸಹ ಆಟಗಾರ ಬಂದು ಸಹಾಯ ಮಾಡಿದರು. ಈ ವೇಳೆ ಅಲ್ಲಿದ್ದವರ ಮುಖದಲ್ಲಿ ನಗುವೋ ನಗು. ಈ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.