ಮಳೆಯಿಂದ ನಿಂತ ಪಂದ್ಯ: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 99ಕ್ಕೆ 7 ವಿಕೆಟ್

ಬುಧವಾರ, 29 ಜುಲೈ 2015 (19:36 IST)
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಷಸ್ ಸರಣಿಯ ಮೂರನೇ  ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಜೆ. ಆಂಡರ್‌ಸನ್ ಅವರ ಅವರ ಬಿರುಗಾಳಿಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಕೇವಲ 99 ರನ್‌ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ.

 ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್ 50 ಅಜೇಯ ರನ್‌ಗಳೊಂದಿಗೆ ಆಡುತ್ತಿದ್ದು, ಉಳಿದ ಬ್ಯಾಟ್ಸ್‌ಮನ್‌ಗಳು ಆಂಡರ್‌ಸನ್ ಅವರ ವೇಗದ ಬೌಲಿಂಗ್‌‍ಗೆ ತತ್ತರಿಸಿ ಪೆವಿಲಿಯನ್ ಹಾದಿ ಹಿಡಿದರು.   ಮಳೆಯಿಂದಾಗಿ ಮೊದಲದಿನದಾಟಕ್ಕೆ ಬ್ರೇಕ್ ಬಿದ್ದಿದೆ. ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್ ಆಂಡರ್‌ಸನ್ ಎಸೆತಕ್ಕೆ ಎಲ್‌ಬಿಡಬ್ಲ್ಯುಗೆ ಬಲಿಯಾದ ಬಳಿಕ ಆಸ್ಟ್ರೇಲಿಯಾ ಪತನ ಆರಂಭವಾಯಿತು.

 ಸ್ಟೀವನ್ ಸ್ಮಿತ್ ಫಿನ್ ಬೌಲಿಂಗ್‌ನಲ್ಲಿ ಸಿ.ಕುಕ್‌ಗೆ ಕ್ಯಾಚಿತ್ತು ಔಟಾದಾಗ ಆಸ್ಟ್ರೇಲಿಯಾ ಸ್ಕೋರ್ 3 ವಿಕೆಟ್ ಕಳೆದುಕೊಂಡು 34 ರನ್‌ಗಳಾಗಿತ್ತು.. ಮೈಕೇಲ್ ಕ್ಲಾರ್ಕ್ ಫಿನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಅದಾದ ಬಳಿಕ ಒಬ್ಬರಾದ ಮೇಲೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದು 7 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ 94 ರನ್ ಗಳಿಸಿದೆ.  ಜೇಮ್ಸ್ ಆಂಡರಸನ್ 11 ಓವರುಗಳಲ್ಲಿ  23 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಟ ಬೌಲಿಂಗ್ ಸಾಧನೆ ಮಾಡಿದರು.  ಸ್ಟೀವನ್ ಫಿನ್ 23 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಲಾ ಒಂದು ಪಂದ್ಯದಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ವಿಜಯಲಕ್ಷ್ಮಿ ಯಾರ ಕೊರಳಿಗೆ ಬೀಳುವುದೋ ಎಂಬ ಕುತೂಹಲ ಮೂಡಿಸಿದೆ. 

ವೆಬ್ದುನಿಯಾವನ್ನು ಓದಿ