ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗೌತಮ್ ಗಂಭೀರ್ ವಿದಾಯ ಹೇಳಿದ್ದರ ಹಿಂದಿನ ಮರ್ಮವೇನು?!

ಬುಧವಾರ, 5 ಡಿಸೆಂಬರ್ 2018 (08:30 IST)
ನವದೆಹಲಿ: ಭಾರತ ತಂಡ ಕಂಡ ಶ್ರೇಷ್ಠ ಎಡಗೈ ಬ್ಯಾಟ್ಸ್ ಮನ್ ಗಳಲ್ಲೊಬ್ಬರಾದ ಗೌತಮ್ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.


37 ವರ್ಷದ ಗಂಭೀರ್ ಟೀಂ ಇಂಡಿಯಾಕ್ಕೆ ಇತ್ತೀಚೆಗೆ ಆಯ್ಕೆಯಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಮುಂಬರುವ ಐಪಿಎಲ್ ನಲ್ಲೂ ಅವರನ್ನು ಯಾವುದೇ ಫ‍್ರಾಂಚೈಸಿ ಕೊಳ್ಳುವುದು ಅನುಮಾನವಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಗಂಭೀರ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಒಟ್ಟು 58 ಟೆಸ್ಟ್ ಪಂದ್ಯವಾಡಿರುವ ಗಂಭೀರ್ 9 ಶತಕಗಳೊಂದಿಗೆ 4154 ರನ್ ಗಳಿಸಿದ್ದಾರೆ. 147 ಏಕದಿನ ಪಂದ್ಯಗಳಿಂದ 5238 ರನ್ ಗಳಿಸಿದ್ದಾರೆ. ಹಾಗೆಯೇ 11 ಟಿ20 ಪಂದ್ಯಗಳಿಂದ 932 ರನ್ ಗಳಿಸಿದ್ದಾರೆ. ಪ್ರಮುಖವಾಗಿ 2011 ರ ವಿಶ್ವಕಪ್ ಫೈನಲ್ ನಲ್ಲಿ ಅವರು ಆಡಿದ ಇನಿಂಗ್ಸ್ ಇಂದಿಗೂ ಕ್ರಿಕೆಟ್ ಪ್ರಿಯರ ಮನದಲ್ಲಿ ಅಚ್ಚಳಿಯದೇ ನಿಂತಿದೆ.

ಕ್ರಿಕೆಟ್ ಹೊರತಾಗಿಯೂ ಸಾಮಾಜಿಕ ಕೆಲಸಗಳಿಂದ ಹೆಸರುವಾಸಿಯಾಗಿರುವ ಗಂಭೀರ್ ರಾಜಕೀಯ ವಿಚಾರಗಳ ಬಗ್ಗೆಯೂ ಕಟುವಾಗಿ ವಿಮರ್ಶಿಸುತ್ತಾರೆ. ಮೈದಾನದಲ್ಲೂ ತಮ್ಮನ್ನು ಕೆಣಕಿದವರಿಗೆ ತಿರುಗೇಟು ನೀಡುವಲ್ಲಿ ಹಿಂದೆ ಮುಂದೆ ನೋಡದ ಆಕ್ರಮಣಕಾರಿ ಸ್ವಭಾವದ ಗಂಭೀರ್ ವಿದಾಯ ಅಭಿಮಾನಿಗಳಿಗೆ ಬೇಸರವುಂಟುಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ