ನವದೆಹಲಿ: ಹಾಕಿ ಕ್ರೀಡೆ ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿದೆ. ರಾಷ್ಟ್ರೀಯ ತಂಡಗಳ ಶೋಚನೀಯ ಪ್ರದರ್ಶನದ ನಡುವೆಯೂ ಹಾಕಿ ರಾಷ್ಟ್ರೀಯ ಕ್ರೀಡೆಯಾಗಿ ಉಳಿದಿದೆ. ಮೊದಲ ಬಾರಿಗೆ ಸುದೀರ್ಘ ಕಾಲದ ಬಳಿಕ ಪುರುಷ ಮತ್ತು ಮಹಿಳಾ ತಂಡವೆರಡಕ್ಕೂ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಆದರೆ ಒಲಿಂಪಿಕ್ಸ್ ಅವಕಾಶದ ಸಂಭ್ರಮದ ಕ್ಷಣದ ನಡುವೆಯೂ ಕಪ್ಪು ಚುಕ್ಕೆಯನ್ನು ಹಾಕಿ ಹಂಚಿಕೊಂಡಿದೆ. ಅತೀ ಗಮನಾರ್ಹ ಮಹಿಳಾ ಹಾಕಿ ಆಟಗಾರ್ತಿ ರಿತು ರಾಣಿಗೆ ರಿಯೊ ಕ್ರೀಡಾಕೂಟಕ್ಕೆ ಮುನ್ನ ಕೊಕ್ ನೀಡಿರುವುದು. ಕಾರಣ ಅವರ ನಡವಳಿಕೆ ಮತ್ತು ಫಿಟ್ನೆಸ್.
24 ವರ್ಷದ ರಿತು ರಾಣಿ ತಂಡದ ನಾಯಕಿಯಾಗಿ ಚಾಲನಾ ಶಕ್ತಿಯಾಗಿದ್ದರು ಮತ್ತು ಭಾರತ ಒಲಿಂಪಿಕ್‌ಗೆ ಅರ್ಹತೆ ಗಳಿಸುವುದರ ಹಿಂದಿದ್ದರು.ಆದಾಗ್ಯೂ ರಿಯೊಗೆ ಭಾರತ ಟಿಕೆಟ್ ಪಡೆಯಲು ನೆರವಾದ 10 ತಿಂಗಳ ಬಳಿಕ ತಂಡದಿಂದ ಅವರನ್ನು ದಬ್ಬಲಾಗಿದೆ. ಅವರನ್ನು ಕೈಬಿಟ್ಟಿರುವುದು ಫಿಟ್‌ನೆಸ್ ಮತ್ತು ನಡವಳಿಕೆ ಆಧಾರವಾಗಿದ್ದರೆ, ಸರ್ದಾರ್ ಸಿಂಗ್ ಕಥೆ ಭಿನ್ನವಾಗಿದೆ.
ಭಾರತದ ಹಾಕಿ ಮುಜುಗರಪಡುವ ಸಂಗತಿಯೆಂದರೆ ರಿತು ಅವರನ್ನು ಶಿಸ್ತು ಮತ್ತು ಫಿಟ್ನೆಸ್ ಪ್ರಶ್ನೆಗಳನ್ನು ಎತ್ತಿ ಕೈಬಿಟ್ಟಿರುವುದು. ಫಾರಂ ಇಲ್ಲದ , ರೇಪ್ ಆರೋಪಕ್ಕೆ ಗುರಿಯಾದ ಸರ್ದಾರ್ ಸಿಂಗ್‌ಗೆ ರಿಯೊಗೆ ಟಿಕೆಟ್ ನೀಡಿರುವುದು. ರೇಪ್ ವಿವಾದವಷ್ಟೇ ಅಲ್ಲದೇ ಪಂಜಾಬಿನ ಆಟಗಾರ ಸಿಂಗ್ ಹಾಕಿ ಅಧಿಕಾರಿಗಳ ಜತೆ ತಿಕ್ಕಾಟಕ್ಕೆ ಇಳಿದಿದ್ದರು. ಸಂದೀಪ್ ಸಿಂಗ್ ಜತೆ ಸರ್ದಾರ್ ಸಿಂಗ್ ರಾಷ್ಟ್ರೀಯ ಶಿಬಿರದಿಂದ ತೆರಳಿದ್ದರಿಂದ ಅಶಿಸ್ತಿನ ಆರೋಪದ ಮೇಲೆ 2 ವರ್ಷ ನಿಷೇಧ ವಿಧಿಸಲಾಗಿತ್ತು. ಅವರು ಕ್ಷಮೆಯಾಚನೆ ಮಾಡಿದ ಮೇಲೆ ಪುನಃ ರಾಷ್ಟ್ರೀಯ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು.