ಭಾರತೀಯ ಶೈಲಿಯಲ್ಲಿ ಮದುವೆಯಾದ ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್
ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಅಲ್ಲಿನ ಸಂಪ್ರದಾಯದಂತೆ ತಮಿಳುನಾಡು ಮೂಲದ ವಿನ್ನಿ ರಾಮನ್ ಅವರನ್ನು ಮ್ಯಾಕ್ಸಿ ಮದುವೆಯಾಗಿದ್ದರು. ಇದೀಗ ಐಪಿಎಲ್ ನಿಮಿತ್ತ ಭಾರತಕ್ಕೆ ಬಂದಿರುವ ಮ್ಯಾಕ್ಸ್ ವೆಲ್ ಮತ್ತೊಮ್ಮೆ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಶಾಸ್ತ್ರೋಸ್ತ್ರಕವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮ್ಯಾಕ್ಸ್ ವೆಲ್ ಮತ್ತು ವಿನ್ನಿ ಜೋಡಿ ಹಾರ ಹಿಡಿದು ಸ್ಟೆಪ್ಸ್ ಹಾಕುತ್ತಿರುವ ವಿಡಿಯೋಗಳು ಈಗ ವೈರಲ್ ಆಗಿವೆ.