ಬುಮ್ರಾ ಏನು ಮಾಡ್ತಾನೆ ಬಿಡು ಎಂದಿದ್ದರಂತೆ ವಿರಾಟ್ ಕೊಹ್ಲಿ!

ಸೋಮವಾರ, 28 ಮಾರ್ಚ್ 2022 (17:09 IST)
ಮುಂಬೈ: ಜಸ್ಪ್ರೀತ್ ಬುಮ್ರಾ ಇಂದು ಟೀಂ ಇಂಡಿಯಾದ ಪ್ರಮುಖ ಬೌಲರ್ ಆಗಿರಬಹುದು. ಆದರೆ 2014 ರಲ್ಲಿ ಅವರ ಬಗ್ಗೆ ಕೊಹ್ಲಿ ಹಗುರವಾಗಿ ಮಾತನಾಡಿದ್ದರು ಎಂಬ ವಿಚಾರನ್ನು ಅವರ ಆರ್ ಸಿಬಿ ಜೊತೆಗಾಗ ಪಾರ್ಥಿವ್ ಪಟೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

2014 ರಲ್ಲಿಯೇ ನಾನು ಜಸ್ಪ್ರೀತ್ ಬುಮ್ರಾ ಬಗ್ಗೆ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೆ. ಆದರೆ ಆಗ ಅವರು ಬುಮ್ರಾ ಏನು ಮಾಡ್ತಾನೆ ಬಿಡು ಎಂದಿದ್ದರು.

‘ನಾನು ಆರ್ ಸಿಬಿಯಲ್ಲಿದ್ದಾಗ ವಿರಾಟ್ ಗೆ ಬುಮ್ರಾ ಬೌಲಿಂಗ್ ಗಮನಿಸಿ ಎಂದಿದ್ದೆ.  ಆಗ ಅವರು ಬಿಡೋ.. ಈ ಬುಮ್ರಾ ವುಮ್ರಾ ಎಲ್ಲಾ ಏನು ಮಾಡ್ತಾರೆ’ ಎಂದಿದ್ದರಂತೆ. ಅಂದು ಕೊಹ್ಲಿ ಅಸಡ್ಡೆ ಮಾಡಿದ್ದ ಅದೇ ಬುಮ್ರಾ ಕೊನೆಗೆ ಅವರ ಬೌಲಿಂಗ್ ಪಡೆಯ ಪ್ರಮುಖ ಅಸ್ತ್ರವಾಗಿದ್ದರು ಎಂಬುದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ