ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ಪ್ರಾಬಲ್ಯ

ಭಾನುವಾರ, 28 ಮೇ 2023 (08:51 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ ಗೆ ಕಾಲಿಟ್ಟು ಗುಜರಾತ್ ಕೇವಲ ಎರಡು ಸೀಸನ್ ಅಷ್ಟೇ ಆಗಿದೆ. ಆದರೆ ಗುಜರಾತ್ ಆರಂಭದಿಂದಲೂ ಪ್ರಾಬಲ್ಯ ಮೆರೆದಿದೆ.

ಕಳೆದ ಋತುವಿನಲ್ಲಿ ಮೊದಲ ಪಂದ್ಯದಲ್ಲೇ ಗಮನ ಸೆಳೆದು ಕೊನೆಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆದ ದಾಖಲೆ ಮಾಡಿದ್ದ ಗುಜರಾತ್ ಈಗ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಈ ಬಾರಿಯೂ ಚಾಂಪಿಯನ್ ಆದರೆ ಅದು ದಾಖಲೆಯಾಗಲಿದೆ. ಈ ಬಾರಿಯ ಆರೆಂಜ್ ಕ್ಯಾಪ್ ಗೌರವ ಗುಜರಾತ್ ಪಾಲಾಗಿದೆ. ಗಿಲ್ ಒಂದೇ ಋತುವಿನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟಿಗ ಎಂಬ ದಾಖಲೆ ಮಾಡಲು ಹೊರಟಿದ್ದಾರೆ. ಹಾರ್ದಿಕ್ ಪಡೆ ಇದುವರೆಗೆ ಪಾಲ್ಗೊಂಡ ಎರಡೂ ಐಪಿಎಲ್ ನಲ್ಲಿ ಮೇಲುಗೈ ಸಾಧಿಸಿ ಚೆನ್ನೈ, ಮುಂಬೈಯಂತೇ ಐಪಿಎಲ್ ನ ಚಾಂಪಿಯನ್ ತಂಡವಾಗುವ ಹಾದಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ