ಐಪಿಎಲ್ 2023: ರೋಹಿತ್ ಶರ್ಮಾ, ಇಶಾನ್ ಕಿಶನ್ ಗೆ ಗಾಯ
ಫೀಲ್ಡಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಬಾಲ್ ತಡೆಯಲು ಹೋಗಿ ಕೈ ಬೆರಳಿಗೆ ಗಾಯಮಾಡಿಕೊಂಡರು. ಹೀಗಾಗಿ ಕೊನೆಯ ಎರಡು ಓವರ್ ಗಳನ್ನು ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡರು. ಆದರೆ ಬಳಿಕ ಬ್ಯಾಟಿಂಗ್ ಮಾಡಲಿಳಿದರು.
ರೋಹಿತ್ ಜೊತೆಗೆ ಇಶಾನ್ ಕಿಶನ್ ಕೂಡಾ ಗಾಯಗೊಂಡಿದ್ದರು. ವಿಕೆಟ್ ಕೀಪಿಂಗ್ ಮಾಡುವಾಗ ಇಶಾನ್ ಕಿಶನ್ ಮುಖಕ್ಕೆ ಗಾಯಗೊಂಡರು. ಹೀಗಾಗಿ ಅವರು ಮತ್ತೆ ಬ್ಯಾಟಿಂಗ್ ಗಿಳಿಯಲಿಲ್ಲ. ರೋಹಿತ್ ಗಾಯ ಗಂಭೀರವಲ್ಲ ಎಂದು ತಿಳಿದುಬಂದಿದೆ. ಆದರೆ ಇಶಾನ್ ಕಿಶನ್ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.