ಭಜ್ಜಿ ಸ್ಫೋರ್ಟ್ಸ್‌ ಜತೆ ಸಂಬಂಧ ಕಡಿದುಕೊಳ್ಳುವಂತೆ ಹರ್ಭಜನ್‌ಗೆ ಸೂಚನೆ

ಶುಕ್ರವಾರ, 19 ಫೆಬ್ರವರಿ 2016 (15:31 IST)
ಕ್ರೀಡಾ ಉತ್ಪನ್ನಗಳ ತಯಾರಿಕಾ ಕಂಪನಿ ಭಜ್ಜಿ ಸ್ಫೋರ್ಟ್‌ನ ಸಂಬಂಧ ಕಡಿದುಕೊಳ್ಳುವಂತೆ ಹರ್ಭಜನ್ ಸಿಂಗ್ ಅವರಿಂದ ಮುಚ್ಚಳಿಕೆ ಪಡೆದುಕೊಳ್ಳಬೇಕೆಂದು ಬಿಸಿಸಿಐ ಓಂಬುಡ್ಸ್ ಮನ್ ನ್ಯಾಯಮೂರ್ತಿ ಎ.ಪಿ.ಶಾಹ್ ಕ್ರಿಕೆಟ್ ಮಂಡಳಿಗೆ ಸೂಚಿಸಿದ್ದಾರೆ. ಕಾರ್ಯಕರ್ತ ನೀರಜ್ ಗುಂಡೆ ಅವರು ಎತ್ತಿದ ಹಿತಾಸಕ್ತಿ ಸಂಘರ್ಷದ ವಿಷಯಗಳನ್ನು ಕುರಿತು ಶಾಹ್ ತನಿಖೆ ಮಾಡುತ್ತಿದ್ದರು.
 
ಈ ಕಂಪನಿಯನ್ನು ಹರ್ಭಜನ್ ಸಿಂಗ್ ಬದಲಿಗೆ ಅವರ ತಾಯಿ ನಿರ್ವಹಿಸುತ್ತಿರುವುದನ್ನು ಓಂಬುಡ್ಸ್‌ಮನ್ ಗಮನಿಸಿದೆ. ಕ್ರಿಕೆಟ್ ಆಡಳಿತಮಂಡಳಿ ಅಥವಾ ಕ್ರೀಡಾ ಉತ್ಪನಗಳಿಗೆ ಅಥವಾ ಕ್ರಿಕೆಟ್ ಕೋಚಿಂಗ್/ ತರಬೇತಿ ಅಕಾಡೆಮಿಗಳಿಗೆ ಕಂಪನಿಗಳನ್ನು ಕ್ರಿಕೆಟರುಗಳ ಸಂಬಂಧಿಗಳ ಹೆಸರಿನಲ್ಲಿ ನಡೆಸಲಾಗುತ್ತಿದ್ದು, ಅವುಗಳ ಜತೆ ಕ್ರಿಕೆಟರುಗಳು ಕೂಡ ನಂಟು ಹೊಂದಿರುವ ಅನೇಕ ಪ್ರಕರಣಗಳನ್ನು ತಮ್ಮ ಗಮನಕ್ಕೆ ತರಲಾಗಿದೆ ಎಂದು ಶಾಹ್ ಕ್ರಿಕೆಟರ್‌ಗೆ, ಗುಂಡೆಗೆ ಮತ್ತು ಬಿಸಿಸಿಐಗೆ ಕಳಿಸಿದ ಈ ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರ ಸಲ್ಲಿಸಿದ ಎರಡು ವರದಿಗಳಲ್ಲಿ ಭಟ್ಟಿ ಸ್ಫೋರ್ಟ್ ಜತೆ ಸಿಂಗ್ ಸಂಬಂಧವನ್ನು ತೋರಿಸಿದೆ. ಸುದ್ದಿಗಳ ಸತ್ಯಾಸತ್ಯತೆಯನ್ನು ಕುರಿತು ಸಿಂಗ್ ಪ್ರಶ್ನಿಸಿಲ್ಲ ಎಂದು ಈಮೇಲ್‌ನಲ್ಲಿ ತಿಳಿಸಲಾಗಿದೆ.
 
 ಭಜ್ಜಿ ಸ್ಫೋರ್ಟ್‌ ಕಂಪನಿಯನ್ನು ಸಿಂಗ್ ತಾಯಿ ಅವತಾರ್ ಕೌರ್ ನಡೆಸುತ್ತಿದ್ದು ಸ್ಥಳೀಯ ತಂಡಗಳಿಗೆ ಕಿಟ್ ಪೂರೈಕೆ ಮಾಡುತ್ತವೆ. ಹರ್ಬಜನ್ ಅವರ ಪ್ರಸಕ್ತ ಗುತ್ತಿಗೆ ಬಿಸಿಸಿಐ ಜತೆ ಜಾರಿಗೆ ಬರುವ ಮೊದಲೇ ಕಂಪನಿಯನ್ನು ಸ್ಥಾಪಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ