ಗೆಳತಿ ಗೀತಾ ಬಾಸ್ರಾಗೆ ಸ್ಫೂರ್ತಿ ನೀಡಿದ ಹರ್ಭಜನ್ ಸಿಂಗ್ ಉತ್ಸಾಹ, ದೈನ್ಯತೆ

ಮಂಗಳವಾರ, 16 ಜೂನ್ 2015 (14:09 IST)
ಸಂಕ್ಷಿಪ್ತ ವಿರಾಮದ ನಂತರ ಮುಂಬರುವ ಚಿತ್ರ ''ಸೆಕೆಂಡ್ ಹ್ಯಾಂಡ್ ಹಸ್ಬೆಂಡ್‌''ನಲ್ಲಿ ನಟಿಸುತ್ತಿರುವ ನಟಿ ಗೀತಾ ಬಾಸ್ರಾ ತಮ್ಮ ಗೆಳೆಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅವರಿಗೆ ಆಟದಲ್ಲಿರುವ ಉತ್ಸಾಹವನ್ನು ತಾವೂ ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ಆಫ್ ಸ್ಪಿನ್ನರ್ ಅವರ ಪ್ರಾಯೋಗಿಕ ಮತ್ತು ವಾಸ್ತವವಾದಿ ಗುಣವನ್ನು ಮೆಚ್ಚಿಕೊಂಡ ನಟಿ, ಅವರು ಅತ್ಯಂತ ದೃಢಮನೋಭಾವದ ವ್ಯಕ್ತಿಯಾಗಿದ್ದು ಪಂದ್ಯಗಳಲ್ಲಿ ಅದನ್ನು ಪ್ರದರ್ಶಿಸಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಯಶಸ್ಸು ಗಳಿಸಿದ ಅವರು ವಿವೇಚನಾಶೀಲ ಮತ್ತು ದೈನ್ಯತೆಯಿಂದ ಕೂಡಿದ್ದು,  ಆಟವನ್ನು ತುಂಬಾ ಪ್ರೀತಿಸುತ್ತಾರೆ. ಅಂತಹ ಗುಣಗಳನ್ನು ನಾನು  ಅವರಿಂದ ಕಲಿಯಬೇಕು ಎಂದು ಬಾಸ್ರಾ ತಮ್ಮ ಭಾವಿ ಪತಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಹರ್ಭಜನ್ ಮತ್ತು ಬಾಸ್ರಾ ಈ ವರ್ಷ ವಿವಾಹ ಬಂಧನಕ್ಕೆ ಕಾಲಿಡುತ್ತಾರೆಂಬ ವದಂತಿ ಹರಡಿದ್ದು, ಈ ಕುರಿತು ಪ್ರಶ್ನಿಸಿದಾಗ, ''ಅದು ಸಂಭವಿಸಿದಾಗ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ನನ್ನ ವಿವಾಹದ ಬಗ್ಗೆ ವದಂತಿಗಳು ಹರಡುತ್ತಿರುವುದು ನಿಜವಾಗಲೂ ಬೇಸರ ತರಿಸುತ್ತಿದೆ. ನಾನು ಏನನ್ನೂ ಮುಚ್ಚಿಡುತ್ತಿಲ್ಲ. ಆ ಸಂದರ್ಭ ಬಂದಾಗ  ನಾನೇ ತಿಳಿಸುತ್ತೇನೆ ಎಂದು ಹೇಳಿದರು. 
 
 ಹರ್ಭಜನ್ ತಮ್ಮ ಚಿತ್ರವನ್ನು ನೋಡಿ ಮೆಚ್ಚಿದ್ದಾರೆನ್ನುವುದು ಬಾಸ್ರಾಗೆ ಗೊತ್ತಿಲ್ಲ. ನಾವು ಚಿತ್ರಗಳ ಬಗ್ಗೆ ಚಿರ್ಚಿಸುವುದೇ ಇಲ್ಲ ಎಂದು ಹೇಳಿದರು. ಆದರೆ   ಹರ್ಭಜನ್ ''ಸೆಕೆಂಡ್ ಹ್ಯಾಂಡ್ ಹಸ್ಬೆಂಡ್‌''ನ ಟ್ರೇಲರ್ ನೋಡಿದ್ದು, ಅದನ್ನು ಅವರು ಮೆಚ್ಚಿದ್ದು ಬಾಸ್ರಾಗೆ ಖುಷಿ ನೀಡಿದೆ. 

ವೆಬ್ದುನಿಯಾವನ್ನು ಓದಿ