ಮೊಹಮ್ಮದ್ ಶಮಿ ಜತೆಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಓಪನರ್ ಆಗಬೇಕು: ವಿವಿಎಸ್ ಲಕ್ಷ್ಮಣ್

ಮಂಗಳವಾರ, 8 ನವೆಂಬರ್ 2016 (08:48 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿ ಜತೆಗೆ ಬೌಲಿಂಗ್ ಆರಂಭಿಸಬೇಕು ಎಂದು ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ತಂಡದಲ್ಲಿ ಐದು ಬೌಲರ್ ಗಳಿರುವುದು ಸೂಕ್ತ ಎಂಬುದು ಅವರ ಅಭಿಪ್ರಾಯ. ಈ ಹಿನ್ನಲೆಯಲ್ಲಿ ಕರುಣ್ ನಾಯರ್ ಬದಲು ಪಾಂಡ್ಯ ಅವರನ್ನು ಅಂತಿಮ ಹನ್ನೊಂದರ ಬಳಗದಲ್ಲಿ ಸೇರಿಸುವುದು ಸೂಕ್ತ ಎಂದಿದ್ದಾರೆ.

ಪಾಂಡ್ಯ ಒಬ್ಬ ಬೌಲರ್ ಆಗಿ ಮಾತ್ರವಲ್ಲ, ಬ್ಯಾಟ್ಸ್ ಮನ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬಲ್ಲರು. ರವಿಚಂದ್ರನ್ ಅಶ್ವಿನ್ ಜತೆಗೆ ಅಮಿತ್ ಮಿಶ್ರಾ ಕೂಡಾ ಸ್ಪಿನ್ ಬೌಲಿಂಗ್ ಜವಾಬ್ದಾರಿ ಹೊತ್ತುಕೊಳ್ಳಬೇಕು. ಹೊಸ ಚೆಂಡಿನಲ್ಲಿ ಉತ್ತಮವಾಗಿ ಆಡುವ ಹಾರ್ದಿಕ್ ಓಪನಿಂಗ್ ಮಾಡಬೇಕು.

ಭಾರತದ ಪಿಚ್ ಗಳು ರಿವರ್ಸ್ ಸ್ವಿಂಗ್ ಗೆ ಸೂಕ್ತವಾಗಿರುತ್ತದೆ. ಮೊಹಮ್ಮದ್ ಶಮಿ ಇದರಲ್ಲಿ ಪರಿಣಿತರು. ಹೀಗಾಗಿ ಐದು ಬೌಲರ್ ಗಳನ್ನು ಹೊಂದಿದ ತಂಡ ಉತ್ತಮ ಎಂದು ಲಕ್ಷ್ಮಣ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ