ಹಾರ್ದಿಕ್ ಪಾಂಡ್ಯ-ಕೆಎಲ್ ರಾಹುಲ್ ವಿಚಾರಣೆಗೆ ಕೊನೆಗೂ ಡೇಟ್ ಫಿಕ್ಸ್
ತನಿಖೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದರ ಮೇಲೆ ಇವರ ಭವಿಷ್ಯವೂ ನಿಂತಿದೆ. ತನಿಖೆ ಬೇಗನೇ ಮುಗಿಯದೇ ಇದ್ದರೆ ಕ್ರಿಕೆಟಿಗರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಘಟನೆಯ ನಂತರ ಇಬ್ಬರೂ ಕ್ರಿಕೆಟಿಗರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲ. ಹಾರ್ದಿಕ್ ಟ್ವಿಟರ್ ನಲ್ಲಿ ಕ್ಷಮೆ ಯಾಚಿಸಿದ್ದರೆ, ರಾಹುಲ್ ಇದುವರೆಗೆ ಪ್ರಕರಣದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ ಮತ್ತು ಯಾರ ಕಣ್ಣಿಗೂ ಕಾಣಿಸಿಲ್ಲ.