ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್
ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. ಇದೀಗ ಅವರು ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆದರೆ ಐಪಿಎಲ್ ಮುಗಿದ ಬಳಿಕ ಯಾವುದೇ ಟೂರ್ನಿ ಇರಲಿಲ್ಲ. ಹೀಗಾಗಿ ಅವರು ಲಂಡನ್ ನಲ್ಲಿಯೇ ನೆಲೆಸಿದ್ದರು.
ಇದೀಗ ಕೊಹ್ಲಿ ಅಭಿಮಾನಿಯೊಬ್ಬರೊಂದಿಗೆ ತೆಗೆಸಿದ್ದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಕೊಹ್ಲಿ ಗಡ್ಡ, ಮೀಸೆ ಎಲ್ಲವೂ ಬಿಳಿಯಾಗಿದೆ. ಇದನ್ನು ನೋಡಿ ನೆಟ್ಟಿಗರು ಕ್ರಿಕೆಟ್ ನಿಂದ ದೂರವಾದ ಮೇಲೆ ಕೊಹ್ಲಿ ಗಡ್ಡಕ್ಕೂ ಡೈ ಮಾಡುವುದನ್ನು ಮರೆತರಾ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಎಲ್ಲಾ ಲಂಡನ್ ವಾಸ್ತವ್ಯದ ಪರಿಣಾಮವಾ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಕ್ಕೆ ಕಾರ್ಯಕ್ರಮವೊಂದರಲ್ಲಿ ಕಾರಣ ವಿವರಿಸಿದ್ದ ಕೊಹ್ಲಿ ನನಗೆ ಈಗ ಎರಡು ದಿನಕ್ಕೊಮ್ಮೆ ಗಡ್ಡಕ್ಕೆ ಡೈ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಸೂಕ್ಷ್ಮವಾಗಿ ತಮಗೆ ವಯಸ್ಸಾಗುತ್ತಿದೆ ಎಂದು ಹೇಳಿದ್ದರು.