Hardik Pandya: ಮುಂಬೈ ಇಂಡಿಯನ್ಸ್ ಬಸ್ ನಲ್ಲಿ ಹೊಸ ಗರ್ಲ್ ಫ್ರೆಂಡ್ ಜೊತೆ ಹಾರ್ದಿಕ್ ಪಾಂಡ್ಯ

Krishnaveni K

ಮಂಗಳವಾರ, 1 ಏಪ್ರಿಲ್ 2025 (10:22 IST)
Photo Credit: X
ಮುಂಬೈ: ನತಾಶಾಗೆ ವಿಚ್ಛೇದನ ಕೊಟ್ಟ ಬಳಿಕ ಹಾರ್ದಿಕ್ ಪಾಂಡ್ಯ ಹೊಸ ಗೆಳತಿಯನ್ನು ಕಂಡುಕೊಂಡಿದ್ದಾರೆ. ಇದೀಗ ಐಪಿಎಲ್ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಬಸ್ ನಲ್ಲಿ ಹಾರ್ದಿಕ್ ಹೊಸ ಗೆಳತಿಯೂ ಕಂಡುಬಂದಿದ್ದಾರೆ.

ನತಾಶಾ ಜೊಕೊವಿಕ್ ಗೆ ವಿಚ್ಛೇದನ ನೀಡಿದ ಬೆನ್ನಲ್ಲೇ ಹಾರ್ದಿಕ್ ಹೆಸರು ಕೆಲವು ನಟಿಯರು, ಮಾಡೆಲ್ ಗಳ ಜೊತೆ ಥಳುಕು ಹಾಕಿಕೊಂಡಿತ್ತು. ಅನನ್ಯಾ ಪಾಂಡೆ, ಬ್ರಿಟಿಷ್ ಮೂಲದ ಮಾಡೆಲ್ ಜೊತೆ ಹಾರ್ದಿಕ್ ಡೇಟಿಂಗ್ ರೂಮರ್ಸ್ ಇತ್ತು.

ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ವೇಳೆ ಟೀಂ ಇಂಡಿಯಾ ಪಂದ್ಯವಾಡುವಾಗ ಒಂದೆರಡು ಬಾರಿ ಹಾರ್ದಿಕ್ ಹೊಸ ಗೆಳತಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು. ಆಗಲೇ ಹಾರ್ದಿಕ್ ಹೊಸ ಹುಡುಗಿಯ ಹಿಂದೆ ಬಿದ್ದಿರುವುದು ಜಗಜ್ಜಾಹೀರಾಗಿತ್ತು.

ಇದೀಗ ಮುಂಬೈ ಇಂಡಿಯನ್ಸ್ ಬಸ್ ನಲ್ಲಿ ಹಾರ್ದಿಕ್ ಹೊಸ ಗೆಳತಿಯೂ ಕಾಣಿಸಿಕೊಂಡಿದ್ದಾರೆ. ಬ್ರಿಟಿಷ್ ಮೂಲದ ಗಾಯಕಿ, ಮಾಡೆಲ್ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹಲವು ಬಾರಿ ಹಾರ್ದಿಕ್ ಜೊತೆ ಅವರು ಕಾಣಿಸಿಕೊಂಡಿದ್ದಾರೆ.

ಅದೂ ಅಲ್ಲದೆ ಈಗ ಟೀಂ ಬಸ್ ನಲ್ಲಿ ಜಾಸ್ಮಿನ್ ಕೂಡಾ ಕೂತಿದ್ದಾರೆ. ಸಾಮಾನ್ಯವಾಗ ತಂಡದ ಬಸ್ ನಲ್ಲಿ ಕ್ರಿಕೆಟಿಗರ ಪತ್ನಿಯರು ಇಲ್ಲವೇ ಆಪ್ತರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಈಗ ಜಾಸ್ಮಿನ್ ಕೂತಿರುವುದು ನೋಡಿ ಇಬ್ಬರೂ ಡೇಟಿಂಗ್ ಮಾಡುತ್ತಿರುವುದಕ್ಕೆ ಪುರಾವೆ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ