159 ರನ್‌ಗಳೊಂದಿಗೆ ಕೊಹ್ಲಿ ದಾಖಲೆ ಮುರಿದ ಹಶೀಮ್ ಆಮ್ಲಾ

ಮಂಗಳವಾರ, 3 ಮಾರ್ಚ್ 2015 (17:10 IST)
ಐರ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಹಶೀಮ್ ಆಮ್ಲಾ 159 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರ  ದಾಖಲೆಯನ್ನು ಮುರಿದಿದ್ದಾರೆ. ಹಶೀಮ್ ಆಮ್ಲಾ ತಮ್ಮ 108 ಇನ್ನಿಂಗ್ಸ್‌ಗಳಲ್ಲಿ 20 ನೇ ಶತಕವನ್ನು ದಾಖಲಿಸಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಅವರು 133ನೇ ಇನ್ನಿಂಗ್ಸ್‌ನಲ್ಲಿ ತಮ್ಮ 20ನೇ ಶತಕ ದಾಖಲಿಸಿದ್ದರು.  ಕೊಹ್ಲಿ ಆಮ್ಲಾಗಿಂತ 5 ವರ್ಷ ಕಿರಿಯರಾಗಿದ್ದು 153 ಏಕದಿನ ಪಂದ್ಯಗಳನ್ನು ಆಡಿದ್ದರೆ, ಪ್ರೋಟೀಸ್ ಆಟಗಾರ 111 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 

 ಕಳೆದ ಜನವರಿಯಲ್ಲಿ ಆಮ್ಲಾ ವಿರಾಟ್ ಕೊಹ್ಲಿಯ ಇನ್ನೊಂದು ದಾಖಲೆ ಮುರಿದಿದ್ದರು. ಆಮ್ಲಾ ಏಕದಿನ ಪಂದ್ಯಗಳ 101 ಇನ್ನಿಂಗ್ಸ್‌ಗಳಲ್ಲಿ ಅತೀ ವೇಗದಲ್ಲಿ 5000 ರನ್ ಗಳಿಸುವ ಮೂಲಕ ಕೊಹ್ಲಿ ದಾಖಲೆ ಮುರಿದ್ದರು. ಕೊಹ್ಲಿ ಮತ್ತು ವಿವಿಯನ್ ರಿಚರ್ಡ್ಸ್ 114 ಇನ್ನಿಂಗ್ಸ್‌ಗಳಲ್ಲಿ 5000 ರನ್ ಮುಟ್ಟಿದ್ದು ಹಿಂದಿನ ದಾಖಲೆಯಾಗಿತ್ತು. 

ವೆಬ್ದುನಿಯಾವನ್ನು ಓದಿ