ಟಿ 20 ಲೀಗ್‌ಗಳ ಜನಪ್ರಿಯತೆಯಿಂದ ದ್ವಿಪಕ್ಷೀಯ ಸರಣಿಗಳಿಗೆ ಅಪಾಯ: ರಿಚರ್ಡ್‌ಸನ್

ಗುರುವಾರ, 30 ಜುಲೈ 2015 (17:06 IST)
ದೇಶೀಯ ಟ್ವೆಂಟಿ 20 ಲೀಗ್‌ಗಳಾದ ಐಪಿಎಲ್ , ಬಿಗ್ ಬ್ಯಾಶ್ ಮತ್ತು ಸಿಪಿಎಲ್‌ನ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ದ್ವಿಪಕ್ಷೀಯ ಸರಣಿಗಳ ಉಳಿವಿಗೆ ಬೆದರಿಕೆ ಉಂಟಾಗಿದೆ ಎಂದು ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್ ಸನ್ ಗುರುವಾರ ಎಚ್ಚರಿಸಿದ್ದಾರೆ. 
 
ದ್ವಿಪಕ್ಷೀಯ ಸರಣಿಗಳ ಅವನತಿಯನ್ನು ತಡೆಯಲು ಜೂನ್‌ನಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮಾವೇಶದಲ್ಲಿ ಅನೇಕ ಸಾಧ್ಯತೆಗಳನ್ನು ಕುರಿತು ಚರ್ಚಿಸಲಾಯಿತು. ಅಕ್ಟೋಬರ್‌ನಲ್ಲಿ ನಡೆಯುವ ಸಭೆಯಲ್ಲಿ ಕೂಡ ಇದು ಮುಖ್ಯಾಂಶಗಳಲ್ಲಿ ಒಂದು ಎಂದು ಹೇಳಿದರು. 
 
ಐಕಾನಿಕ್ ಮತ್ತು ಸಾಂಪ್ರದಾಯಿಕ ಸ್ಥಾನಮಾನ ಹೊಂದಿರುವ ಆಷಸ್ ಸರಣಿ ಮತ್ತು ಭಾರತ ಮತ್ತು ಪೂರ್ಣಕಾಲಿಕ ಮೇಲಿನ ಕ್ರಮಾಂಕದ ಸದಸ್ಯ ರಾಷ್ಟ್ರಗಳ ನಡುವಿನ ಸರಣಿಗಳನ್ನು ಹೊರತುಪಡಿಸಿದರೆ, ಅನೇಕ ದ್ವಿಪಕ್ಷೀಯ ಸರಣಿಗಳು ಕಡಿಮೆ ಪ್ರಸ್ತುತತೆಯಿಂದ ಕೂಡಿದೆ. ಅನೇಕ ಸರಣಿಗಳಲ್ಲಿ ವಿಶೇಷವಾಗಿ ಟೆಸ್ಟ್ ಸರಣಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕುಸಿದಿದ್ದು, ಇವುಗಳಿಂದ ಸಿಗುವ ಆದಾಯ ಹೆಚ್ಚುತ್ತಿಲ್ಲ. ಐಪಿಎಲ್, ಬಿಗ್ ಬ್ಯಾಶ್ ಮತ್ತು ಸಿಪಿಎಲ್ ಮುಂತಾದ ದೇಶೀಯ ಟಿ20 ಲೀಗ್‌ಗಳ ಯಶಸ್ಸಿನಿಂದ  ಕಾಲಾನುಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ದೃಶ್ಯಾವಳಿ ಬದಲಾಗಿದೆ ಎಂದು ರಿಚರ್ಡ್‌ಸನ್ ವಿವರಿಸಿದರು. 
 
ಈ ಪಂದ್ಯಾವಳಿಗಳು ಅಭಿಮಾನಿಗಳಿಂದ ವ್ಯಾಪಕ ಬೆಂಬಲ ಗಳಿಸಿದ್ದು, ಇದರಿಂದಾಗಿ ಪ್ರಸಾರಕರು, ಪ್ರಾಯೋಜಕರು ಮತ್ತು ವಾಣಿಜ್ಯ ಪಾಲುದಾರರ ಆಸಕ್ತಿಯನ್ನು ಕೆರಳಿಸಿದೆ ಎಂದು ಅವರು ಹೇಳಿದರು. 

 

ವೆಬ್ದುನಿಯಾವನ್ನು ಓದಿ