ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಗಳಲ್ಲಿ ಗೆದ್ದವರು ಯಾರು, ಬಿದ್ದವರು ಯಾರು?

ಶನಿವಾರ, 28 ಮಾರ್ಚ್ 2015 (12:47 IST)
ಸಿಡ್ನಿ: ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಭಾನುವಾರದ ಫೈನ‌ಲ್‌ನಲ್ಲಿ ಎದುರಿಸಲಿದ್ದು, ಇದು ಸಹ ಆತಿಥೇಯ ರಾಷ್ಟ್ರದ ವಿರುದ್ಧ ಸಹ ಆತಿಥೇಯ ರಾಷ್ಟ್ರದ ಪಂದ್ಯವಾಗಲಿದ್ದು, ಬಹುಶಃ ಆಸ್ಟ್ರೇಲಿಯಾದಲ್ಲಿ ಹಿಂದೆಂದೂ ಕಂಡಿರದ ದೊಡ್ಡ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.  ಮುಂಚಿನ ವಿಶ್ವಕಪ್ ಫೈನಲ್ಸ್‌ಗಳ ಹಿನ್ನೋಟ ಕೆಳಗೆ ಕೊಡಲಾಗಿದೆ.

1975:  ಇಂಗ್ಲೆಂಡ್  ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು 17 ರನ್‌ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್‌‌ಗೆ ವಿಶ್ವಕಪ್ ಕಿರೀಟ
ಆಸಿಸ್‌ನ ಡೆನ್ನಿಸ್ ಲಿಲ್ಲಿ ಮತ್ತು ಥಾಮ್ಸನ್ ವೇಗದ ದಾಳಿಯನ್ನು ಪಳಗಿಸಿದ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್  85 ಎಸೆತಗಳಲ್ಲಿ 102 ರನ್ ಬಾರಿಸಿದರು. ಅವರಿಗೆ ರೋಹನ್ ಕನ್ಹಾಯ್ ಉತ್ತಮ ಬೆಂಬಲ ನೀಡಿ ವೆಸ್ಟ್ ಇಂಡೀಸ್ 60 ಓವರುಗಳಲ್ಲಿ  8 ವಿಕೆಟ್‌ ನಷ್ಟಕ್ಕೆ  291 ರನ್‌ಗಳಲ್ಲಿ 55 ರನ್ ಕೊಡುಗೆಯನ್ನು ನೀಡಿದರು.
 ಆಸಿಸ್ ಐಯಾನ್ ಚಾಪೆಲ್ 62 ರನ್ ಗಳಿಸಿದರಾದರೂ ರನ್ ಔಟ್‌ಗೆ ಬಲಿಯಾದರು. ಆಸ್ಚ್ರೇಲಿಯಾ ಐದು ರನ್‌ಔಟ್‌ಗಳಿಂದ ಪತನದ ದಾರಿ ಹಿಡಿಯಿತು. ಲಿಲ್ಲೀ ಮತ್ತು ಥಾಮ್ಸನ್ ಅಂತಿಮ ವಿಕೆಟ್‌ಗೆ 41 ರನ್ ಕಲೆಹಾಕಿದರೂ ಆಸಿಸ್ ಅಂತಿಮವಾಗಿ 274 ರನ್‌ಗೆ ಆಲೌಟ್‌ ಆಯಿತು. 
 
 1979: ವೆಸ್ಟ್ ಇಂಡೀಸ್‌ಗೆ  ಇಂಗ್ಲೆಂಡ್ ತಂಡದ ವಿರುದ್ಧ 92 ರನ್ ಜಯ (ಲಾರ್ಡ್ಸ್ ಮೈದಾನ) 
ವಿವಿಯನ್ ರಿಚರ್ಡ್ಸ್ ಮನೋಜ್ಞ 138 ಮತ್ತು ಕಾಲಿಸ್ ಕಿಂಗ್ ಅವರ ಬಿರುಸಿನ 86 ರನ್ ನೆರವಿನಿಂದ ವೆಸ್ಟ್ ಇಂಡೀಸ್ 9 ವಿಕೆಟ್‌ಗೆ 289 ರನ್ ಗಳಿಸಿತು. 
 ವೆಸ್ಟ್ ಇಂಡೀಸ್ ಜೋಯಿಲ್ ಗಾರ್ನರ್ ಯಾರ್ಕರ್ ಸರಣಿಗಳ ಪ್ರಯೋಗದ ಮೂಲಕ 11 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ತಂಡಕ್ಕೆ 92 ರನ್ ಜಯ ತಂದಿತ್ತರು. ಕಾಲಿನ್ ಕ್ರಾಫ್ಟ್ ಕೂಡ 3 ವಿಕೆಟ್ ಕಬಳಿಸಿದರು. 
 
 1983: ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ(ಲಾರ್ಡ್ಸ್ ಮೈದಾನ) 
 ಭಾರತದ 183 ರನ್ ಸ್ಕೋರನ್ನು ಸುಲಭವಾಗಿ ಗುರಿದಾಟಿ ಫೈನಲ್ಸ್ ವಿಜಯಿಯಾಗಬಹುದೆಂದು ವೆಸ್ಟ್ ಇಂಡೀಸ್ ವಿವಿಯನ್ ರಿಚರ್ಡ್ಸ್ ಭಾವಿಸಿದ್ದರು. ಅವರು 28 ಎಸೆತಗಳಲ್ಲಿ ಏಳು ಬೌಂಡರಿಯ 33 ರನ್ ಗಳಿಸಿದರು. ನಂತರ ಅವರ ಹುಕ್ ಶಾಟ್‌ಗೆ ಕಪಿಲ್ ದೇವ್ ಬೌಂಡರಿ ಗೆರೆಯ ಬಳಿ ಧಾವಿಸಿ ಕ್ಯಾಚ್ ಹಿಡಿದರು.  ಇದಾದ ಬಳಿಕ ವೆಸ್ಟ್ ಇಂಡೀಸ್ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ 43 ರನ್‌‍ಗಳ ಅಂತರದಿಂದ ಸೋಲಪ್ಪಿತು. 
 
 1987: ಕೊಲ್ಕತ್ತಾ ಎಡೆನ್‌ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸಿಸ್‌ಗೆ 7 ರನ್ ಜಯ
ಡೇವಿಡ್ ಬೂನ್ ಅವರ 75 ರನ್‌ನಿಂದ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 253 ರನ್ ಸ್ಕೋರ್ ಮಾಡಿತು. ಇಂಗ್ಲೆಂಡ್ ಗೆಲುವು ಗಳಿಸಬಹುದೆಂದು ಕಂಡುಬಂದರೂ ರಿವರ್ಸ್ ಸ್ವೀಪ್‌ಗೆ ಪ್ರಯತ್ನಿಸಿ ಕ್ಯಾಚಿತ್ತು ಔಟಾದ ಬಳಿಕ ಆಸಿಸ್ ಏಳು ರನ್‌ಗಳಿಂದ ಜಯಗಳಿಸಿತು. 
 
 1992: ಇಂಗ್ಲೆಂಡ್‌ ತಂಡವನ್ನು 22 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ (ಮೆಲ್ಬರ್ನ್ ಕ್ರಿಕೆಟ್ ಮೈದಾನ) 
 ಬಣ್ಣದ ಉಡುಪು, ಫ್ಲಡ್ ಲೈಟ್ ಮತ್ತು ಬಿಳಿಯ ಚೆಂಡನ್ನು ವಿಶ್ವಕಪ್‌ಗೆ ಪರಿಚಯಿಸಲಾಯಿತು.  ಇಮ್ರಾನ್ ಮೂರನೇ ಕ್ರಮಾಂಕದಲ್ಲಿ ಆಡಿ 72 ರನ್ ಸ್ಕೋರ್ ಮಾಡಿದರು. ಪಾಕಿಸ್ತಾನ 50 ಓವರುಗಳಲ್ಲಿ 249 ರನ್ ಸ್ಕೋರ್ ಮಾಡಿತು. ವಾಸಿಮ್ ಅಕ್ರಮ್ ಐಯಾನ್ ಬೋಥಮ್, ಅಲನ್ ಲ್ಯಾಂಬ್ ಮತ್ತು ಕ್ರಿಸ್ ಲೆವಿಸ್ ಅವರನ್ನು ಔಟ್ ಮಾಡಿದ ಬಳಿಕ ಇಮ್ರಾನ್ ಕೊನೆಯ ವಿಕೆಟ್ ಕಬಳಿಸಿ ಪಾಕ್‌ ವಿಶ್ವಕಪ್ ವಿಜಯಿಯಾಯಿತು.  
ಮುಂದಿನ ಪುಟವನ್ನು ನೋಡಿ 
1996: ಲಾಹೋರ್‌ನಲ್ಲಿ ಆಸಿಸ್ ತಂಡವನ್ನು ಸೋಲಿಸಿದ ಶ್ರೀಲಂಕಾ 
ಆಸ್ಟ್ರೇಲಿಯಾ 7 ವಿಕೆಟ್ 241 ರನ್ ಸ್ಕೋರನ್ನು ಬೆನ್ನಟ್ಟಿದ ಅರವಿಂದ್ ಡಿಸಿಲ್ವಾ(107) ಮತ್ತು ಗುರುಸಿನ್ಹಾ(65) ಶ್ರೀಲಂಕಾಗೆ ಪ್ರಥಮ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟರು. 
 1999: ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ(ಲಾರ್ಡ್ಸ್ ಮೈದಾನ ) 
 ಪಾಕಿಸ್ತಾನ 39 ಓವರುಗಳಲ್ಲಿ 132 ರನ್‌ಗಳಿಗೆ ಆಲೌಟ್ ಶೇನ್ ವಾರ್ನ್‌ಗೆ ನಾಲ್ಕು ವಿಕೆಟ್. ಕೇವಲ 20.1 ಓವರುಗಳಲ್ಲಿ ಗಿಲ್‌‍ಕ್ರಿಸ್ಟ್ ಅವರ 54 ರನ್ ನೆರವಿನಿಂದ ಆಸಿಸ್ ಗುರಿ ತಲುಪಿತು. 
 
2003: ಭಾರತವನ್ನು 125 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (ಜೋಹಾನ್ಸ್‌ಬರ್ಗ್) 
 ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 140 ರನ್ ಸ್ಕೋರಿನಲ್ಲಿ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 2 ವಿಕೆಟ್ ಕಳೆದುಕೊಂಡು 359 ರನ್ ಸ್ಕೋರ್ ಮಾಡಿತು. ಈ ಗುರಿಯನ್ನು ಬೆನ್ನಟ್ಟುವುದು ಅಸಾಧ್ಯವೆನಿಸಿ 234 ರನ್‌ಗಳಿಗೆ ಭಾರತ ಆಲೌಟ್ ಆಯಿತು. 
 
 2007: ಶ್ರೀಲಂಕಾವನ್ನು 53 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ(ಬಾರ್ಬಡೋಸ್) 
ಗಿಲ್‌ಕ್ರಿಸ್ಟ್ 149 ರನ್‌ಗಳಿಸಿ ಪಾಟಿಂಗ್ ದಾಖಲೆಯನ್ನು ಮುರಿದರು. ಮಳೆಯಿಂದ ಮೊಟಕಾದ ಪಂದ್ಯದಲ್ಲಿ ಆಸಿಸ್ 53 ರನ್‌ಗಳಲ್ಲಿ ಜಯಗಳಿಸಿತು. ಈ ಜಯದಿಂದ ಆಸಿಸ್‌ ಸತತವಾಗಿ ಮೂರನೇ ವಿಶ್ವಕಪ್ ಗೆಲುವನ್ನು ಒಟ್ಟಾರೆಯಾಗಿ ನಾಲ್ಕು ಗೆಲುವುಗಳನ್ನು ಗಳಿಸಿದ ಕೀರ್ತಿಗೆ ಪಾತ್ರವಾಯಿತು. 
 2011: ಮುಂಬೈನಲ್ಲಿ ಶ್ರೀಲಂಕವಾವನ್ನು ಸೋಲಿಸಿದ ಭಾರತ
ಶ್ರೀಲಂಕಾದ ಸವಾಲಿನ  6ಕ್ಕೆ 274 ಮೊತ್ತವನ್ನು ಬೆನ್ನಟ್ಟಿದ ಭಾರತದ ಪರ ಗಂಭೀರ್ 97 ಮತ್ತು ಧೋನಿ ಅಜೇಯ 91 ರನ್ ನೆರವಿನಿಂದ ತವರಿನಲ್ಲಿ ವಿಶ್ವಕಪ್ ಫೈನಲ್ ಗೆದ್ದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ವೆಬ್ದುನಿಯಾವನ್ನು ಓದಿ