ಮನೆಕೆಲಸದಾಕೆ ಮೇಲೆ ಹಲ್ಲೆ: ವಿನೋದ್ ಕಾಂಬ್ಳಿ ದಂಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು

ಭಾನುವಾರ, 30 ಆಗಸ್ಟ್ 2015 (14:44 IST)
ವೇತನ ಕೇಳಿದ್ದಕ್ಕೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತು ಪತ್ನಿ ಆಂಡ್ರಿಯಾ ವಿರುದ್ಧ ಮನೆಕೆಲಸದಾಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.   
 
ಮನೆಕೆಲಸದಾಕೆಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಕಾಂಬ್ಳಿ ದಂಪತಿಗಳ ವಿರುದ್ಜ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಳೆದ ಎರಡು ವರ್ಷಗಳಿಂದ ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ ನಿವಾಸದಲ್ಲಿ ಮನೆಕೆಲಸದಾಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ವೇತನ ಕೇಳಿದ್ದರಿಂದ ದೈಹಿಕವಾಗಿ ಹಲ್ಲೆ ಮಾಡಿ ಮೂರು ದಿನಗಳು ಕೋಣೆಯಲ್ಲಿ ಕೂಡಿಹಾಕಿ ನಂತರ ಮತ್ತೆ ಕೆಲಸಕ್ಕೆ ಬಾರದಂತೆ ತಾಕೀತು ಮಾಡಿ ಹೊರಕಳುಹಿಸಿದ್ದಾರೆ ಎಂದು ಮನೆಕೆಲಸದಾಕೆ ಸೋನಿ ಆರೋಪಿಸಿದ್ದಾಳೆ.
 
ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ ವಿರುದ್ಧ ಸೆಕ್ಷನ್ 342, 504, 506 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ