ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಗಾಯವೇ ವರವಾಗಿದ್ದು ಹೇಗೆ ಗೊತ್ತಾ?
ಸಂಪೂರ್ಣ ಫಿಟ್ ಆಗಿರದೇ ಇದ್ದ ಕಾರಣ ಬುಮ್ರಾ ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಗಳಿಗೆ ಆಯ್ಕೆಯಾದರೂ ಆಡದೇ ಬೆಂಚ್ ಕಾಯಿಸುತ್ತಿದ್ದರು. ಪೆವಿಲಿಯನ್ ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ಬುಮ್ರಾಗೆ ಇದರಿಂದ ಲಾಭವಾಗಿದೆಯಂತೆ.
ಮೊದಲ ಎರಡು ಟೆಸ್ಟ್ ನಲ್ಲಿ ಎದುರಾಳಿ ವೇಗಿಗಳು, ತಮ್ಮ ತಂಡದ ಬೌಲರ್ ಗಳು ಹೇಗೆ ಬಾಲ್ ಮಾಡುತ್ತಾರೆಂದು ಕೂಲಂಕುಷವಾಗಿ ವೀಕ್ಷಿಸಿದ ಬುಮ್ರಾಗೆ ತಾನು ಹೇಗೆ ತಯಾರಾಗಬೇಕೆಂದು ತಿಳಿಯತಂತೆ. ಅದೇ ಕಾರಣಕ್ಕೆ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲಿಯೇ ವಿಕೆಟ್ ಕಿತ್ತು ಸಹಾಯ ಮಾಡಲು ಸಾಧ್ಯವಾಯಿತು ಎಂದು ಬುಮ್ರಾ ಹೇಳಿಕೊಂಡಿದ್ದಾರೆ.