ಆಸ್ಟ್ರೇಲಿಯಾ ತಂಡದ ಮೋಸದಾಟ ಟೀಂ ಇಂಡಿಯಾಗೆ ಗೊತ್ತಾಗಿದ್ದು ಹೇಗೆ? ಬಯಲಾಯ್ತು ರಹಸ್ಯ!

ಗುರುವಾರ, 9 ಮಾರ್ಚ್ 2017 (11:47 IST)
ಬೆಂಗಳೂರು: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಡಿಆರ್ ಎಸ್ ಬಳಸಲು ಡ್ರೆಸ್ಸಿಂಗ್ ರೂಂ ಕಡೆ ನೋಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ಆಸ್ಟ್ರೇಲಿಯನ್ನರ ಈ ಮೋಸದಾಟ ಭಾರತ ತಂಡಕ್ಕೆ ಗೊತ್ತಾಗುವುದಕ್ಕೆ ಪ್ರಮುಖ ಕಾರಣವಿದೆ. ಅದೇನದು? ಈ ಸುದ್ದಿ ಓದಿ.

 
ಅಸಲಿಗೆ ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಿದ್ದವರಿಗೆ, ಆಸ್ಟ್ರೇಲಿಯನ್ನರ ಮೋಸದಾಟದ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು. ಅದು ಮಿಚೆಲ್ ಮಾರ್ಷ್ ಔಟಾದಾಗ ಅನುಮಾನ ಹುಟ್ಟಿಕೊಂಡಿತ್ತು. ಮಾರ್ಷ್ ಔಟಾದಾಗ ಡಿಆರ್ ಎಸ್ ಗೆ ಮನವಿ ಸಲ್ಲಿಸಲಿಲ್ಲ. ಆಗ ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಂ ನಿಂದ ಮೈದಾನದಲ್ಲಿದ್ದ ಆಟಗಾರರಿಗೆ ಸಿಗ್ನಲ್ ಹೋಗಿದ್ದನ್ನು ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿದ್ದವರು ಗಮನಿಸಿದ್ದರು.

ಇದರ ನಂತರ ಟೀಂ ಇಂಡಿಯಾ ವ್ಯವಸ್ಥಾಪಕರು ಮೈಯೆಲ್ಲಾ ಕಣ್ಣಾಗಿಸಿ ಕುಳಿತರು. ಅಕ್ಕ ಪಕ್ಕ ಡ್ರೆಸ್ಸಿಂಗ್ ರೂಂ ಇದ್ದುದ್ದು ಭಾರತ ತಂಡಕ್ಕೆ ಸಹಕಾರಿಯಾಯ್ತು.  ಸಾಲದ್ದಕ್ಕೆ ಭಾರತ ತಂಡದ ವಿಡಿಯೋ ಅನಲಿಸ್ಟ್ ತಮ್ಮ ಲ್ಯಾಪ್ ಟಾಪ್ ನಲ್ಲಿ ಲೈವ್ ಆಗಿ ನಡೆಯುತ್ತಿದ್ದ ವಿದ್ಯಮಾನಗಳನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಇದರಿಂದ ಆಸೀಸ್ ಆಟಗಾರರ ಡಿಆರ್ ಎಸ್ ಚೀಟಿಂಗ್ ರಹಸ್ಯ ಬಯಲಾಯ್ತು. ಅದಕ್ಕೇ ಕೊಹ್ಲಿ ಕೂಡಾ ಅಷ್ಟೊಂದು ಕೆರಳಿದ ವರ್ತನೆ ತೋರಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ