ಕೋಚ್ ಹುದ್ದೆಗೆ ಸಂದರ್ಶನ: ಇಂದು ಬಿಸಿಸಿಐ ಹೆಸರನ್ನು ಪ್ರಕಟಿಸುವ ನಿರೀಕ್ಷೆ

ಬುಧವಾರ, 22 ಜೂನ್ 2016 (18:30 IST)
ಕೋಲ್ಕತಾದಲ್ಲಿ ಭಾರತದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಬಿಸಿಸಿಐ ಸ್ಥಾಪಿಸಿದ ಕ್ರಿಕೆಟ್ ಸಲಹಾ ಸಮಿತಿ ಮಂಗಳವಾರ ಸಂದರ್ಶನ ಮಾಡಿದೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ಲಕ್ಷ್ಮಣ್ ಅವರ ಸಮಿತಿ 6ರಿಂದ 7 ಅಭ್ಯರ್ಥಿಗಳ ಸಂದರ್ಶನ ನಡೆಸಿತು.
 
ಸಂದರ್ಶನದಲ್ಲಿ ಹಾಜರಾದ ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ನಿರೀಕ್ಷೆಯಂತೆ ಅತ್ಯಂತ ಗಮನಸೆಳೆದ ಅಭ್ಯರ್ಥಿಗಳು. ಕುಂಬ್ಳೆ ಸಂದರ್ಶನಕ್ಕೆ ವೈಯಕ್ತಿಕವಾಗಿ ಹಾಜರಾಗಿದ್ದರೆ, ಶಾಸ್ತ್ರಿ ಥಾಯ್ಲೆಂಡ್‌ನಲ್ಲಿದ್ದು ಸ್ಕೈಪ್‌ ಮೂಲಕ ಸಂದರ್ಶನದಲ್ಲಿ ಭಾಗವಹಿಸಿದರು.
ಸಿಎಸಿ ತನ್ನ ವರದಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು  ಕೋಚ್ ಹುದ್ದೆಯ ಭಾಗ್ಯ ಯಾರ ಕೊರಳಿಗೆ ಎಂಬ ದೊಡ್ಡ ಪ್ರಕಟಣೆ ಇಂದು ಹೊರಬೀಳುತ್ತದೆಂದು ನಿರೀಕ್ಷಿಸಲಾಗಿದೆ. ಸಂದರ್ಶನದಲ್ಲಿದ್ದ ಇತರೆ ಅಭ್ಯರ್ಥಿಗಳು ಟಾಮ್ ಮೂಡಿ, ಸ್ಟುವರ್ಟ್ ಲಾ, ಲಾಲ್‌ಚಂದ್ ರಜಪೂತ್, ಪ್ರವೀಣ್ಆಮ್ರೆ , ಆಂಡಿ ಮೋಲ್ಸ್  ಮುಂತಾದವರು. 
 
ಈ ನಡುವೆ ಗಂಗೂಲಿ ತಾವು 2005ರಲ್ಲಿ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಹೆಸರನ್ನು ಶಿಫಾರಸು ಮಾಡಿದ ಪ್ರಮಾದವನ್ನು ಈ ಬಾರಿ ಎಸಗುವುದಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ