ಯಾವ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಆಡಬಲ್ಲೆ: ಅಜಿಂಕ್ಯಾ ರಹಾನೆ

ಶನಿವಾರ, 12 ಸೆಪ್ಟಂಬರ್ 2015 (16:02 IST)
ಟೆಸ್ಟ್ ಲೈನ್ ಅಪ್‌ನಲ್ಲಿ ರಹಾನೆಗೆ  ಸೂಕ್ತ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ, ತಾವು ಹಿತಕರ ವಲಯದಿಂದಾಚೆಯೂ ಬ್ಯಾಟಿಂಗ್ ಇಷ್ಟಪಡುತ್ತೇನೆ ಎಂದು ರಹಾನೆ ಹೇಳಿದ್ದಾರೆ. ಹೇಗೆ ಬರುತ್ತದೋ ಹಾಗೆ ಸ್ವೀಕರಿಸುತ್ತೇನೆ. ಶ್ರೀಲಂಕಾದಲ್ಲಿ ಮೂರನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ನಾನು ಖುಷಿಪಟ್ಟೆ. ಟೀಂ ಮ್ಯಾನೇಜ್‌ಮೆಂಟ್ ಹೇಳಿದ ಹಾಗೆ ನಾನು ಮಾಡುತ್ತೇನೆ.  ಯಾವ ಕ್ರಮಾಂಕದಲ್ಲಾದರೂ ಅಥವಾ ಯಾವುದೇ ಪರಿಸ್ಥಿತಿಯಲ್ಲಾದರೂ ನಾನು ಬ್ಯಾಟಿಂಗ್ ಮಾಡಬಲ್ಲೆನೆಂಬ ನಂಬಿಕೆ ಟೀಂ ಮ್ಯಾನೇಜ್ ಮೆಂಟ್ ಮತ್ತು ನಾಯಕನಿಗಿದೆ ಎಂದು ರಹಾನೆ ಹೇಳಿದರು. 
 
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ದೊಡ್ಡ ಬ್ಯಾಟಿಂಗ್ ಯಶಸ್ಸು ಗಳಿಸಿದ ಹಾಗೆ ಶ್ರೀಲಂಕಾದಲ್ಲಿ ಬ್ಯಾಟಿಂಗ್ ಸಾಧನೆ ಮಾಡಿರದಿದ್ದರೂ ಅಜಿಂಕ್ಯಾ ರಹಾನೆಗೆ ತಂಡ 2-1ರಿಂದ ಗೆದ್ದಿರುವುದು ಖುಷಿತಂದಿದೆ. 
 
 ನಾನು ಶತಕ ಬಾರಿಸಿದ ಪಂದ್ಯದಲ್ಲೇ ಗೆದ್ದಿದ್ದೇವೆ. ನಾನು ಇನ್ನಷ್ಟು ರನ್ ಸ್ಕೋರ್ ಮಾಡಲು ಬಯಸಿದ್ದೆ. ಆದರೆ ನಾವು 0-1ರ ಹಿನ್ನಡೆ ಬಳಿಕವೂ ಟೆಸ್ಟ್ ಸರಣಿ ಗೆದ್ದಿರುವುದು ಖುಷಿ ತಂದಿದೆ ಎಂದು ಉದ್ಗರಿಸಿದ್ದಾರೆ.  ರಹಾನೆ ದೇಶದ ಹೊರಗೆ ನಾಲ್ಕು ಟೆಸ್ಟ್ ಶತಕಗಳನ್ನು ಎರಡು  ಬಾರಿ 90ರ ಗಡಿಯಲ್ಲಿ  ಸ್ಕೋರ್ ಮಾಡಿದ್ದರು. ಅಗತ್ಯ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಎಲ್ಲವೂ ಅಡಗಿದೆ. ಇದು ಮಾನಸಿಕ ಹೊಂದಾಣಿಕೆಯಾಗಿದ್ದು, 3ನೇ ಕ್ರಮಾಂಕದಲ್ಲಿ  ಬ್ಯಾಟಿಂಗ್ ಮಾಡುವಾಗ 5ನೇ ಕ್ರಮಾಂಕಕ್ಕಿಂತ ಸ್ವಲ್ಪ ಹೆಚ್ಚು ಸಮಯ ಸೆಟ್ಲ್ ಆಗುವುದಕ್ಕೆ ಬೇಕಾಗುತ್ತದೆ.

ಮೂರನೇ ಕ್ರಮಾಂಕದಲ್ಲಿ ಅರ್ಧಗಂಟೆ ಬೌಲರುಗಳಿಗೆ ಬಿಟ್ಟು, ಬೌನ್ಸ್ ಹೇಗೆ ಬರುತ್ತದೆ, ಪಿಚ್ ನಡವಳಿಕೆಯೇನು ಎಂದು ತಿಳಿದು ಸಹಜ ಪ್ರವೃತ್ತಿಯಲ್ಲಿ ಆಡುತ್ತೇನೆ ಎಂದು ರಹಾನೆ ಹೇಳಿದರು.  5ನೇ ಕ್ರಮಾಂಕದಲ್ಲಿ ನೀವು ವಾಸ್ತವವಾಗಿ 10-15 ನಿಮಿಷ ಸಾಕಾಗುತ್ತದೆ. ಡ್ರೆಸಿಂಗ್ ರೂಂನಲ್ಲಿ ಕುಳಿತು ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದು ತಿಳಿದಿರುತ್ತದೆ ಎಂದು ರಹಾನೆ ಹೇಳಿದರು. 
 
ಓಪನರ್‌ಗಳ ಆಟ ಮತ್ತು ಮೂರನೇ ಕ್ರಮಾಂಕದ ಆಟವನ್ನು ಗಮನಿಸಿ ನಾವು ವಿಕೆಟ್ ಮತ್ತು ಬೌಲಿಂಗ್ ದಾಳಿಯ ಬಗ್ಗೆ, ಅವರ ಲೈನ್ ಮತ್ತು ಲೆಂಗ್ತ್ ಬಗ್ಗೆ ತಿಳಿದು 10-15ನಿಮಿಷಗಳಲ್ಲಿ ನಮ್ಮ ಶಾಟ್‍ಗಳನ್ನು ಹೊಡೆಯಬಹುದು. ಮೂರನೇ ಕ್ರಮಾಂಕದಲ್ಲಿ ಶಾಟ್ ಆಯ್ಕೆ ಮುಖ್ಯವಾಗಿದ್ದರೆ, 5ನೇ ಕ್ರಮಾಂಕದಲ್ಲಿ ಮಾನಸಿಕ ಹೊಂದಾಣಿಕೆ ಮುಖ್ಯವಾಗಿದೆ ಎಂದು ವಿವರಿಸಿದರು. 
 

ವೆಬ್ದುನಿಯಾವನ್ನು ಓದಿ