ಧೋನಿಯಿಂದ ನಾಯಕತ್ವದ ಪಾಠ ಕಲಿತಿದ್ದೇನೆ: ವಿರಾಟ್ ಕೊಹ್ಲಿ

ಗುರುವಾರ, 6 ಅಕ್ಟೋಬರ್ 2016 (15:38 IST)
ಮಹೇಂದ್ರ ಸಿಂಗ್ ಧೋನಿಯವರಿಂದ ತುಂಬಾ ಕಲಿತಿದ್ದಾಗಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
 
ಕಳೆದ ಎರಡು ವರ್ಷಗಳ ಹಿಂದೆ ಭಾರತ ಟೆಸ್ಟ್ ತಂಡದ ನಾಯಕರಾಗಿ ಹೊಣೆ ವಹಿಸಿಕೊಂಡ ಕೊಹ್ಲಿ, ಅತ್ಯುತ್ತಮ ದಾಖಲೆಗಳನ್ನು ಹೊಂದಿರುವ ನಾಯಕ ಎನ್ನುವ ಹೊಗಳಿಕೆಗೆ ಪಾತ್ರರಾಗಿದ್ದಾರೆ. 
 
ತಂಡದ ನಾಯಕನಾಗಿರುವವರು ಪರಿಣಾಮದ ಚಿಂತನೆ ಮಾಡದೇ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದೇ ನನ್ನ ಸಲಹೆಯಾಗಿದೆ ಎಂದು ತಿಳಿಸಿದ್ದಾರೆ. 
 
ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 16 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಜಯಗಳಿಸಿದೆ. ಎರಡು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದ್ದರೆ, ಇತರ ಐದು ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿವೆ.
 
ಮಹೇಂದ್ರ ಸಿಂಗ್ ಧೋನಿಯವರ ನಿರ್ಧಾರಗಳು, ನಾಯಕತ್ವದ ಗುಣಗಳ ಬಗ್ಗೆ ತುಂಬಾ ಗೌರವ ಹೊಂದಿರುವ ಕೊಹ್ಲಿ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಧೈರ್ಯ ಬೇಕಾಗುತ್ತದೆ. ಅದನ್ನು ನಾನು ಧೋನಿಯವರಿಂದ ಕಲಿತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. 
 
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಹೊಣೆ ಉತ್ತಮ ಕ್ರಿಕೆಟಿಗನನ್ನಾಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ದೇಶಕ್ಕಾಗಿ ತಂಡದ ಹೊಣೆಯನ್ನು ಹೊರುವುದು ಗೌರವದ ಸಂಗತಿ. ಇಂತಹ ಗೌರವ ನನಗೆ ದೊರತಿರುವುದು ಅತೀವ ಸಂತಸ ತಂದಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ