16 ಕೋಟಿ ಕೊಡಿ ಎಂದು ಕೇಳಿಯೇ ಇರಲಿಲ್ಲ: ಯುವರಾಜ್ ಸಿಂಗ್

ಶನಿವಾರ, 18 ಏಪ್ರಿಲ್ 2015 (15:41 IST)
ತಮ್ಮ ಫಾರಂ ಕುರಿತು ಪ್ರಶ್ನೆಗಳಿಗಾಗಿ ಮತ್ತು ಐಪಿಎಲ್‌ ಹರಾಜಿನಲ್ಲಿ  ತಮಗೆ ದಾಖಲೆಯ 16 ಕೋಟಿ ರೂ. ಶುಲ್ಕ ನೀಡಿರುವ ಸುತ್ತ ಆವರಿಸಿರುವ ವಿವಾದದಿಂದ ಸಿಟ್ಟಿಗೆದ್ದಿರುವ ಯುವರಾಜ್ ಸಿಂಗ್ ತಾವು ಡೆಲ್ಲಿ ಡೇರ್ ಡೆವಿಲ್ಸ್‌ಗೆ 16 ಕೋಟಿ ರೂ. ಕೊಡಿ ಎಂದು ಕೇಳಿಯೇ ಇಲ್ಲ ಎಂದು ಶುಕ್ರವಾರ ಉತ್ತರಿಸಿದ್ದಾರೆ.
 
ಪಂದ್ಯಾವಳಿಯಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹರಾಜಿನಲ್ಲಿ 16 ಕೋಟಿ ರೂ.ಗೆ ಮಾರಾಟವಾಗಿರುವ  33 ವರ್ಷ ವಯಸ್ಸಿನ ಯುವರಾಜ್ , ನಾನು 16 ಕೋಟಿ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಅದು ನನ್ನ ಕೈಯಲ್ಲೂ ಇರಲಿಲ್ಲ.  ಹರಾಜಿನಲ್ಲಿ ಬೇರೆ ಆಟಗಾರನ ರೀತಿ ನಾನೂ ಒಬ್ಬನಾಗಿದ್ದೆ. ಮೊತ್ತವನ್ನು ಗಣನೆಗೆ ತೆಗೆದುಕೊಳ್ಳದೇ ನಾನು ಐಪಿಎಲ್‌ನಲ್ಲಿ ಆಡುತ್ತಿದ್ದೆ. ನನ್ನ ಆದ್ಯತೆ ಸದಾ ಕ್ರಿಕೆಟ್ ಆಡುವುದು ಎಂದು ಯುವರಾಜ್ ವಿವರಿಸಿದರು. 
 
ಗ್ಯಾರಿ ಕಿರ್ಸ್ಟನ್ ಕುರಿತು ಮಾತನಾಡುತ್ತಾ, ಅವರು ಭಾರತದ ತಂಡದಲ್ಲಿ ಕೋಚ್ ಆಗಿದ್ದಾಗ ಯಾವ ಸಂಬಂಧವಿತ್ತೋ ಈಗಲೂ ಅದೇ ಸಂಬಂಧವಿದೆ. ಅವರು ನನ್ನಿಂದ ಉತ್ತಮವಾದದ್ದನ್ನು ತೆಗೆಯುತ್ತಾರೆ. ಅದು ನನಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು. 
 
 ಗ್ಯಾರಿ ಭಾರತದ ತಂಡದ ಕೋಚ್ ಆಗಿದ್ದಾಗ,  ಕೇವಲ 15 ಆಟಗಾರರನ್ನು ನಿಭಾಯಿಸುತ್ತಿದ್ದರು.  ಆದರೆ ಐಪಿಎಲ್‌ನಲ್ಲಿ ಅವರು 25 ಆಟಗಾರರನ್ನು ನಿಭಾಯಿಸಬೇಕಿರುವುದರಿಂದ ಅದು ಭಿನ್ನವಾಗಿರುತ್ತದೆ. ಅವರು ಅತ್ಯುತ್ಕೃಷ್ಟ ಕೋಚ್ ಆಗಿದ್ದು, ತಂಡಕ್ಕೆ ಆಸ್ತಿಯಾಗಿದ್ದಾರೆ ಎಂದು ಯುವರಾಜ್ ಹೇಳಿದರು. 
 
ಹಿಂದಿನ ಆಟದಲ್ಲಿ 50 ರನ್ ಹೊಡೆದ ಬಗ್ಗೆ ಯುವರಾಜ್ ಸಂತಸಗೊಂಡಿದ್ದಾರೆ. ಟಿ20ಯಲ್ಲಿ ನಾವು ಆಟಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯ ಸಿಗುವುದಿಲ್ಲ. ಕಳೆದ ಪಂದ್ಯದಲ್ಲಿ ನಾನು ಅನೇಕ ಓವರುಗಳನ್ನು ಆಡಿ ನನ್ನ ಹೆಸರಿನಲ್ಲಿ ರನ್‌ಗಳನ್ನು ಮಾಡಿದ್ದೇನೆ.  ಎರಡು ಪಾಯಿಂಟ್‌ಗಳನ್ನು ಪಡೆಯುವುದು ಅತೀ ಮುಖ್ಯವಾಗಿದೆ. ನಾನು ರನ್ ಸ್ಕೋರ್ ಮಾಡಿದ್ದಕ್ಕಿಂತ ಹೆಚ್ಚಾಗಿ ತಂಡ ಗೆಲುವು ಗಳಿಸಿದ್ದು ನಿಟ್ಟುಸಿರುಬಿಡುವಂತಾಗಿದೆ ಎಂದು ಯುವರಾಜ್ ಹೇಳಿದರು. 

ವೆಬ್ದುನಿಯಾವನ್ನು ಓದಿ