ವರದಿ ತಯಾರಿಸುವ ಮುನ್ನ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಸಲಹೆ ಕೇಳಿದ್ದರಂತೆ ನ್ಯಾ. ಲೋಧಾ!
ಮಂಗಳವಾರ, 17 ಜನವರಿ 2017 (12:31 IST)
ಮುಂಬೈ: ಬಿಸಿಸಿಐನಲ್ಲಿ ಬಿರುಗಾಳಿ ಎಬ್ಬಿಸಿದ ಕ್ರಿಕೆಟ್ ಸುಧಾರಣೆ ವರದಿಗಳನ್ನು ತಯಾರಿಸುವ ಮೊದಲು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಕಪಿಲ್ ದೇವ್ ಮುಂತಾದವರನ್ನು ಸಂಪರ್ಕಿಸಿದ್ದೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ನ್ಯಾಯಮೂರ್ತಿ ಲೋಧಾ ಹೇಳಿದ್ದಾರೆ.
ನಾವು ಸುಮ್ಮನೇ ವರದಿ ತಯಾರಿಸಿ ಸುಪ್ರೀಂ ಕೋರ್ಟ್ ಗೆ ನೀಡಿಲ್ಲ. ವರದಿ ತಯಾರಿಸುವ ಮೊದಲು ಕ್ರಿಕೆಟ್ ದಿಗ್ಗಜರನ್ನು ಬಿಸಿಸಿಐನ ಉನ್ನತಾಧಿಕಾರಿಗಳಾದ ಜಗಮೋಹನ್ ದಾಲ್ಮಿಯಾರಿಂದ ಹಿಡಿದು ಅನುರಾಗ್ ಠಾಕೂರ್ ವರೆಗೆ ಎಲ್ಲರನ್ನೂ ಸಂಪರ್ಕಿಸಿ, ಚರ್ಚೆ ನಡೆಸಿದ್ದೆವು ಎಂದು ಲೋಧಾ ಹೇಳಿದ್ದಾರೆ.
ಈ ವರದಿಯ ನಿಜವಾದ ತಿರುಳೆಂದರೆ, ಭಾರತೀಯ ಕ್ರಿಕೆಟ್ ಗೆ ಹೊಸ ಉತ್ತೇಜನ ನೀಡುವುದು.ನಮ್ಮಲ್ಲಿ ಪ್ರತಿಭಾವಂತರು ಹಲವರಿದ್ದಾರೆ. ಒಬ್ಬರೇ ಹಲವು ದಶಕಗಳ ಕಾಲ ಅಧಿಕಾರ ಹೊಂದಿರುವುದು ಸರಿಯಲ್ಲ. ಎಲ್ಲರಿಗೂ ಅವಕಾಶ ನೀಡಿ ಎನ್ನುವುದೇ ನಮ್ಮ ಉದ್ದೇಶ ಎಂದು ಲೋಧಾ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ