ಐಸಿಸಿ ಶ್ರೇಯಾಂಕ: ಟಿ 20ಯಲ್ಲಿ ಕೊಹ್ಲಿ 2ನೇ ಸ್ಥಾನ, ಏಕದಿನದಲ್ಲಿ 3ನೇ ಸ್ಥಾನ

ಶನಿವಾರ, 10 ಅಕ್ಟೋಬರ್ 2015 (18:59 IST)
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟ್ವೆಂಟಿ 20 ಅಂತಾರಾಷ್ಟ್ರೀಯದ ನಂಬರ್ ಒನ್ ಶ್ರೇಯಾಂಕವನ್ನು ಆಸ್ಟ್ರೇಲಿಯಾದ ಆರಾನ್ ಫಿಂಚ್ ಅವರಿಗೆ 9 ಪಾಯಿಂಟ್‌ಗಳಿಂದ ಕಳೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಕಳಪೆ ಸರಣಿ ಬಳಿಕ ಈ ಬೆಳವಣಿಗೆ ಉಂಟಾಗಿದೆ. ಇತ್ತೀಚಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಟಗಾರರ ಶ್ರೇಯಾಂಕದಲ್ಲಿ ಭಾರತದ ಟೆಸ್ಟ್ ನಾಯಕ ಕೊಹ್ಲಿ ಫಿಂಚ್ ಅವರಿಗಿಂತ 9 ಪಾಯಿಂಟ್ ಹಿಂದಿದ್ದಾರೆ. 9 ತಿಂಗಳು ಯಾವುದೇ ಪಂದ್ಯ ಆಡಿರದಿದ್ದರೂ ಫಿಂಚ್ ಅವರು 854 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. 
 
ಆದರೆ ಅಚ್ಚರಿಯೆಂದರೆ ಅಪಾಯಕಾರಿ ಡಿವಿಲಿಯರ್ಸ್ ಕಿರು ಓವರುಗಳ ಕ್ರಿಕೆಟ್‌ನಲ್ಲಿ 34ನೇ ಸ್ಥಾನದಲ್ಲಿದ್ದಾರೆ. ಅವರ ಸಹಆಟಗಾರ ಡುಮಿನಿ ಗಣನೀಯ ಶ್ರೇಯಾಂಕ ಗಳಿಸಿ 22ನೇ ಶ್ರೇಯಾಂಕದಲ್ಲಿದ್ದಾರೆ.  ಸುರೇಶ್ ರೈನಾ ಟಾಪ್ 20ರಲ್ಲಿರುವ ಏಕಮಾತ್ರ ಭಾರತೀಯ ಆಟಗಾರರಾಗಿದ್ದಾರೆ. 
 
ಏಕ ದಿನ ಪಂದ್ಯಗಳ ಶ್ರೇಯಾಂಕದಲ್ಲಿ ಕೊಹ್ಲಿ ಡಿ ವಿಲಿಯರ್ಸ್ ಮತ್ತು ಹಶೀಮ್ ಆಮ್ಲಾ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ ಮತ್ತು ದೋನಿ ಕ್ರಮವಾಗಿ 6ನೇ ಮತ್ತು 8ನೇ ಸ್ಥಾನದಲ್ಲಿದ್ದಾರೆ. ಅಗ್ರ 20ರ ಸ್ಥಾನದೊಳಕ್ಕೆ  ರೋಹಿತ್ ಶರ್ಮಾ (15) ಮತ್ತು ಸುರೇಶ್ ರೈನಾ (18) ಇದ್ದಾರೆ.
 
ಟೆಸ್ಟ್ ಶ್ರೇಯಾಂಕದಲ್ಲಿ ಆಸೀಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅಗ್ರ ಸ್ಥಾನ ಅಲಂಕರಿಸಿದ್ದು, ಡಿ ವಿಲಿಯರ್ಸ್ ಮತ್ತು ಇಂಗ್ಲಿಷ್ ಬ್ಯಾಟ್ಸ್‌ಮನ್ ಜೋಯ್ ರೂಟ್ ಅವರಿಗಿಂತ ಮುಂದಿದ್ದಾರೆ.  ಈ ಮಾದರಿಯ ಕ್ರಿಕೆಟ್‌ನಲ್ಲಿ ಕೂಡ ಕೊಹ್ಲಿ 11ನೇ ಸ್ಥಾನದಲ್ಲಿದ್ದಾರೆ.ಪೂಜಾರಾ, ಮುರಳಿ ವಿಜಯ್ ಮತ್ತು ರಹಾನೆ ಕ್ರಮವಾಗಿ 20, 21 ಮತ್ತು 22ನೇ ಸ್ಥಾನಗಳಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ