ಟಿ20 ವಿಶ್ವಕಪ್ ಮುಂದೂಡಿಕೆ? ಐಸಿಸಿ ಸಭೆಯಲ್ಲಿ ಚರ್ಚೆ

ಮಂಗಳವಾರ, 26 ಮೇ 2020 (09:15 IST)
ದುಬೈ: ಆಸ್ಟ್ರೇಲಿಯಾದಲ್ಲಿ ಇದೇ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಕೂಟವನ್ನು ಮುಂದೂಡುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾಗವಹಿಸಿಲ್ಲ.

 

ಈ ವರ್ಷ ನಡೆಯಬೇಕಿರುವ ಟಿ20 ವಿಶ್ವಕಪ್ ಕೂಟವನ್ನು 2021 ರ ಫೆಬ್ರವರಿ ಮಾರ್ಚ್ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲೇ ನಡೆಸಬೇಕು ಮತ್ತು 2022 ರ ವಿಶ್ವಕಪ್ ಆತಿಥ್ಯವನ್ನು  ಭಾರತದಲ್ಲಿ ನಡೆಸಬಹುದು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಆದರೆ ಇದಕ್ಕೆ ಪಾಕಿಸ್ತಾನ ಎರಡು ವಿಶ್ವಕಪ್ ನಡುವಿನ ಅಂತರ ಕಡಿಮೆಯಾಯಿತು ಎಂದು ಅಪಸ್ವರವೆತ್ತಿದೆ ಎನ್ನಲಾಗಿದೆ. ಆದರೆ ಈ ಸಭೆಯಲ್ಲಿ ಬಿಸಿಸಿಐ ಪಾಲ್ಗೊಳ್ಳದೇ ಇರುವುದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಭಿಪ್ರಾಯವೇನೆಂದು ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ