ಪ್ರಶಸ್ತಿ ವಿತರಣೆ ಸಮಾರಂಭ: ಎನ್‌.ಶ್ರೀನಿವಾಸನ್ ವಿರುದ್ಧ ಕಿಡಿಕಾರಿದ ಐಸಿಸಿ ಅಧ್ಯಕ್ಷ ಮುಸ್ತಾಫಾ ಕಮಲ್

ಸೋಮವಾರ, 30 ಮಾರ್ಚ್ 2015 (19:49 IST)
ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ಕೊಡುವ ಅಧಿಕಾರವನ್ನು ಮುಖ್ಯಸ್ಥ ಎನ್.ಶ್ರೀನಿವಾಸನ್ ಕಸಿದುಕೊಂಡಿದ್ದಾರೆ ಎಂದು ಐಸಿಸಿ ಅಧ್ಯಕ್ಷ ಮುಸ್ತಾಫಾ ಕಮಲ್ ಆರೋಪಿಸಿದ್ದಾರೆ.

ವಿಶ್ವಕಪ್ 2015 ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಎನ್.ಶ್ರೀನಿವಾಸನ್, ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕೆಗೆ ಟ್ರೋಫಿ ವಿತರಿಸಿದರು .ವೇದಿಕೆಯಲ್ಲಿ ಪಂದ್ಯಾವಳಿಯ ಬ್ರಾಂಡ್ ರಾಯಬಾರಿಯಾಗಿದ್ದ ಸಚಿನ್ ತೆಂಡೂಲ್ಕರ್, ಐಸಿಸಿ ಸಿಇಒ ದವೆ ರಿಚರ್ಡ್ಸನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ವಾಲ್ಲೆ ಎಡ್‌ವರ್ಡ್ ಉಪಸ್ಥಿತರಿದ್ದರು.  

ಐಸಿಸಿ ಸಂವಿಧಾನದ ಪ್ರಕಾರ ಐಸಿಸಿ ಅಧ್ಯಕ್ಷರೇ ವಿಶ್ವಕಪ್ ಗೆದ್ದ ತಂಡಕ್ಕೆ ಟ್ರೋಫಿ ವಿತರಿಸಬೇಕಾಗುತ್ತದೆ.

ನನ್ನ ಕಾನೂನು ತಜ್ಞರ ತಂಡದೊಂದಿಗೆ ವಿಷಯದ ಬಗ್ಗೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದ ನಂತರ ಮುಂದೆ ಯಾವ ರೀತಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎನ್ನುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಮುಸ್ತಾಫಾ ಕಮಲ್ ತಿಳಿಸಿದ್ದಾರೆ.

ಐಸಿಸಿ ಸಭೆಯಲ್ಲಿ ನಾನು ಐಸಿಸಿ ಅಧ್ಯಕ್ಷನಾಗಿದ್ದರಿಂದ ವಿಜೇತ ತಂಡಕ್ಕೆ ನಾನು ಟ್ರೋಫಿ ನೀಡುತ್ತೇನೆ. ಬೇರೆಯವರು ನೀಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಭಾರತ- ಬಾಂಗ್ಲಾ ವಿರುದ್ಧಧ ಪಂದ್ಯದ ರುಬೆಲ್ ಹೊಸೈನ್ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದಿದ್ದರೂ ಅಂಪೈರ್‌ಗಳು ಭಾರತದ ಒತ್ತಡಕ್ಕೆ ಮಣಿದು ಔಟ್ ನೀಡಲಿಲ್ಲ ಎಂದು ಆರೋಪಿಸಿದಾಗ ಶ್ರೀನಿವಾಸನ್ ಮತ್ತಷ್ಟು ಆಕ್ರೋಶಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾಗಿರುವ ಮುಸ್ತಾಫಾ ಕಮಲ್, ಬಿಸಿಸಿಐ ಒತ್ತಡದಿಂದಾಗಿ ಅಂಪೈರ್‌ಗಳು ಪಕ್ಷಪಾತ ಧೋರಣೆ ಅನುಸರಿಸುತ್ತಾರೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ