ಕಾನ್ಪುರ ಪಿಚ್ ಕಳಪೆಯೆಂದು ಐಸಿಸಿ ಬಾಂಬ್

ಮಂಗಳವಾರ, 1 ಡಿಸೆಂಬರ್ 2015 (18:54 IST)
ಭಾರತ  ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದುಕೊಂಡು ಸರಣಿ ಜಯವನ್ನು ಸಾಧಿಸಿ ಹೆಮ್ಮೆಯಿಂದ ಬೀಗುತ್ತಿರುವ ನಡುವೆ ಐಸಿಸಿ ಬಾಂಬ್ ಸ್ಫೋಟಿಸಿದೆ. ಕಾನ್ಪುರದಲ್ಲಿ  ಮೂರನೇ ಟೆಸ್ಟ್ ಆಡಿದ ಮೈದಾನ ಕಳಪೆಯೆಂದು ರೇಟಿಂಗ್ ನೀಡಿರುವುದಾಗಿ ಘೋಷಿಸಿದೆ.

ಐಸಿಸಿ ಪಂದ್ಯ ರೆಫರಿ ಜೆಫ್ ಕ್ರೋವ್ ಐಸಿಸಿಗೆ ತಮ್ಮ ವರದಿಯನ್ನು ಸಲ್ಲಿಸಿದ್ದು, ಪಿಚ್ ನಿರ್ವಹಣೆ ಕುರಿತು ಪಂದ್ಯದ ಅಧಿಕಾರಿಗಳ ಕಳವಳವನ್ನು ತಿಳಿಸಿದ್ದಾರೆ. ಈ ವರದಿಯನ್ನು ಬಿಸಿಸಿಐಗೆ ಕಳಿಸಲಾಗಿದ್ದು, ಬಿಸಿಸಿಐ ಪ್ರತಿಕ್ರಿಯೆ ನೀಡಲು 14 ದಿನಗಳ ಕಾಲಾವಕಾಶ ನೀಡಿದೆ. 
 
 ಬಿಸಿಸಿಐ ತನ್ನ ಪ್ರತಿಕ್ರಿಯೆ ನೀಡಿದ ಬಳಿಕ , ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲ್ಲಾರ್‌ಡೈಸ್ ಮತ್ತು ಐಸಿಸಿ ಪಂದ್ಯ ರೆಫರಿ ರಂಜನ್ ಮದುಗಲ್ಲೆ ಪಂದ್ಯದ ವಿಡಿಯೋ ಫೂಟೇಜ್ ಸೇರಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಪಿಚ್ ಕಳಪೆಯಾಗಿದೆಯೋ ಇಲ್ಲವೋ  ಮತ್ತು ದಂಡ ವಿಧಿಸಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ. 
ಕಾನ್ಪುರ ಟೆಸ್ಟ್‌ನಲ್ಲಿ ಭಾರತ 215 ಮತ್ತು 173 ರನ್ ಹೊಡೆದರೆ ದಕ್ಷಿಣ ಆಫ್ರಿಕಾ 79 ಮತ್ತು 185 ರನ್ ಬಾರಿಸಿತ್ತು. 

ವೆಬ್ದುನಿಯಾವನ್ನು ಓದಿ