ಉತ್ತಮ ಪ್ರದರ್ಶನ ನೀಡಿದರೂ ಅಗ್ರ 10 ರಿಂದ ಹೊರಕ್ಕೆ ಬಿದ್ದ ಮಯಾಂಕ್ ಅಗರ್ವಾಲ್

ಬುಧವಾರ, 4 ಮಾರ್ಚ್ 2020 (09:16 IST)
ದುಬೈ: ಐಸಿಸಿ ಇತ್ತೀಚೆಗಿನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ನ್ಯೂಜಿಲೆಂಡ್ ಸರಣಿಯಲ್ಲಿ ಉಳಿದ ಆಟಗಾರರಿಗಿಂತ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಹೆಚ್ಚಿನ ಅಂಕ ಸಂಪಾದಿಸಲು ವಿಫಲರಾದ ಮಯಾಂಕ್ ಅಗರ್ವಾಲ್ ಅಗ್ರ 10 ರ ಸ್ಥಾನದಿಂದ ಹೊರಬಿದ್ದಿದ್ದಾರೆ.


ಆದರೆ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಸ್ಟೀವ್ ಸ್ಮಿತ್ ನಂ.1 ಬ್ಯಾಟ್ಸ್ ಮನ್ ಆಗಿದ್ದಾರೆ.

ಉಳಿದಂತೆ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಏಳು ಮತ್ತು ಅಜಿಂಕ್ಯಾ ರೆಹಾನೆ ಒಂಭತ್ತನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಏಳನೇ ಸ್ಥಾನದಲ್ಲಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಂ ಇಂಡಿಯಾ ಬೌಲರ್ ಗಳೂ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ