ಭಾರತದಿಂದ ಟಿ20 ವಿಶ್ವಕಪ್ ಆತಿಥ್ಯ ಕಸಿದುಕೊಳ್ಳುವ ಬೆದರಿಕೆ ಹಾಕಿದ ಐಸಿಸಿ

ಬುಧವಾರ, 27 ಮೇ 2020 (09:38 IST)
ದುಬೈ: ತೆರಿಗೆ ವಿನಾಯಿತಿ ವಿಚಾರದಲ್ಲಿ ಐಸಿಸಿ ಮತ್ತು ಬಿಸಿಸಿಐ ನಡುವೆ ಕಿತ್ತಾಟ ನಡೆದಿದ್ದು, ಐಸಿಸಿ ಭಾರತದ ಬಳಿಯಿರುವ 2021 ರ ಟಿ20 ವಿಶ್ವಕಪ್ ಆತಿಥ್ಯದ ಹಕ್ಕನ್ನು ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದೆ.


ಒಂದು ವೇಳೆ ಬಿಸಿಸಿಐ ಭಾರತದ ಸರ್ಕಾರದಿಂದ ವಿಶ್ವಕಪ್ ಆಯೋಜಿಸಲು ತೆರಿಗೆ ವಿನಾಯಿತಿ ಪಡೆಯಲು ವಿಫಲವಾದರೆ ವಿಶ್ವಕಪ್ ಆತಿಥ್ಯದ ಹಕ್ಕು ಕಸಿದುಕೊಳ್ಳಬೇಕಾದೀತು ಎಂದು ಬಿಸಿಸಿಐಗೆ ಐಸಿಸಿ ಎಚ್ಚರಿಕೆ ನೀಡಿದೆ.

ಇದಕ್ಕಾಗಿ ಮೇ 18 ರ ಗಡುವು ನೀಡಿತ್ತು. ಆದರೆ ಬಿಸಿಸಿಐ ಜೂನ್ 30 ರವರೆಗೆ ಸಮಯ ನೀಡುವಂತೆ ಕೇಳಿಕೊಂಡಿತ್ತು. ಈ ಕುರಿತಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಜತೆ ಬಿಸಿಸಿಐ ಈಮೇಲ್ ಮೂಲಕ ಕಿತ್ತಾಟ ನಡೆಸಿದೆ ಎನ್ನಲಾಗಿದೆ. ಇದರ ನಡುವೆಯೇ ಐಸಿಸಿ ಇಂತಹದ್ದೊಂದು ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ