ಟಿ20 ವಿಶ್ವಕಪ್ ಹಣೆಬರಹ ಇಂದು ನಿರ್ಧರಿಸಲಿರುವ ಐಸಿಸಿ

ಬುಧವಾರ, 10 ಜೂನ್ 2020 (09:18 IST)
ದುಬೈ: ಕೊರೋನಾ ವೈರಸ್ ನಿಂದಾಗಿ ಅನಿಶ್ಚತತೆಯಲ್ಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟ ನಡೆಸಬೇಕೋ ಅಥವಾ ಮುಂದೂಡಬೇಕೋ ಎಂಬ ವಿಚಾರದ ಬಗ್ಗೆ ಐಸಿಸಿ ಇಂದು ತೀರ್ಮಾನ ತೆಗೆದುಕೊಳ್ಳಲಿದೆ.

 

ಐಸಿಸಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಕ್ಟೋಬರ್ 18 ರಿಂದ ನವಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಕೂಟ ನಡೆಯುವುದು ಎಂದು ಈ ಮೊದಲು ತೀರ್ಮಾನಿಸಲಾಗಿತ್ತು.

ಆದರೆ ಕೊರೋನಾದಿಂದಾಗಿ ಆಟಗಾರರು ಪ್ರವಾಸ ಮಾಡುವುದು, ಇಂತಹ ದೊಡ್ಡ ಕೂಟ ಆಯೋಜಿಸುವುದರಿಂದ ರೋಗ ಹರಡುವ ಭೀತಿ ಹೆಚ್ಚಿರುವ ಹಿನ್ನಲೆಯಲ್ಲಿ ವಿಶ್ವಕಪ್ ನಡೆಸಬೇಕೋ ಬೇಡವೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ