40ನೇ ವಯಸ್ಸಿನಲ್ಲಿ ಸಚಿನ್ ಆಡಬಹುದಾದ್ರೆ, ನೆಹ್ರಾ ಯಾಕೆ ಆಡಬಾರ್ದು: ಸೆಹ್ವಾಗ್

ಗುರುವಾರ, 5 ಅಕ್ಟೋಬರ್ 2017 (13:46 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 40ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬಹುದಾದರೆ, 38 ವರ್ಷ ವಯಸ್ಸಿನ ಆಶೀಶ್ ನೆಹ್ರಾ ಯಾಕೆ ಪಂದ್ಯಗಳಲ್ಲಿ ಪಾಲ್ಗೊಳ್ಳಬಾರದು ಎಂದು ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ.  
ರಾಂಚಿಯಲ್ಲಿ ಅಕ್ಟೋಬರ್ 7 ರಿಂದ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ -20 ಅಂತರರಾಷ್ಟ್ರೀಯ ಸರಣಿಗೆ ಭಾರತ ತಂಡಕ್ಕೆ ಅನುಭವಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು ಸೇರ್ಪಡೆಯಾಗಿರುವುದು ಅಚ್ಚರಿ ತಂದಿಲ್ಲ ಎಂದು ಮಾಜಿ ಭಾರತ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
 
38 ವರ್ಷ ವಯಸ್ಸಿನ ನೆಹ್ರಾ ಅವರನ್ನು 15 ಸದಸ್ಯರ ತಂಡದಲ್ಲಿ ಸೇರ್ಪಡೆಗೊಳಿಸಿರುವುದು ಕೆಲವರಿಗೆ ಆಶ್ಚರ್ಯ ತಂದಿದೆ. ಆದರೆ, ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವಂತಹ ಪ್ರತಿಭೆ ನೆಹ್ರಾ ಬಳಿಯಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.
 
ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ -20 ತಂಡದಲ್ಲಿ ನೆಹ್ರಾ ಅವರ ಆಯ್ಕೆ ನನಗೆ ಅಚ್ಚರಿ ತರಲಿಲ್ಲ, ಅವರು ತಂಡದ ಒಂದು ಭಾಗವಾಗಿದ್ದಾರೆ ಎನ್ನುವುದಕ್ಕೆ ಸಂತಸವಾಗಿದೆ. ಭವಿಷ್ಯದಲ್ಲಿ ಅವರು ಹೆಚ್ಚು ಪಂದ್ಯಗಳನ್ನು ಆಡಲಿ ಎಂದು ಬಯಸುವುದಾಗಿ ಹೇಳಿದ್ದಾರೆ. 
 
ಆಶೀಶ್ ನೆಹ್ರಾ ಅಂತಾರಾಷ್ಟ್ರೀಯ ಪಂದ್ಯಾವಳಿಯಿಂದ ದೂರವಿದ್ದಾಗ ಜಿಮ್‌ನಲ್ಲಿ ಎಂಟು ಗಂಟೆಗಳ ಕಾಲ ವ್ಯಾಯಾಮದಲ್ಲಿ ತೊಡಗುವುದು ಅವರ ದೈಹಿಕ ಕ್ಷಮತೆಯ ರಹಸ್ಯವಾಗಿದೆ. ದೈಹಿಕ ಪರೀಕ್ಷೆಯಲ್ಲಿ ನೆಹ್ರಾ, ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ್ದಾರೆ ಎಂದು ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ