ಬೌಲರುಗಳಿಗಿಂತ ಟಿ 20 ಯಲ್ಲಿ ಬ್ಯಾಟ್ಸ್‌ಮನ್ ಸುಧಾರಣೆ: ರಾಹುಲ್ ದ್ರಾವಿಡ್

ಶುಕ್ರವಾರ, 15 ಜುಲೈ 2016 (19:51 IST)
ಟಿ 20 ಕ್ರಿಕೆಟ್ ಕಳೆದ ದಶಕದಿಂದ ಪರಿವರ್ತನೆಯ ಹಂತವನ್ನು ಮುಟ್ಟಿದ್ದು, ಬೌಲರ್‌ಗಳಿಗೆ ಹೋಲಿಕೆ ಮಾಡಿದರೆ ಬ್ಯಾಟ್ಸ್‌ಮನ್‌ಗಳು ಸುಧಾರಣೆಯ ಹೆಚ್ಚು ಲಕ್ಷಣಗಳನ್ನು ತೋರಿಸಿದ್ದಾರೆ ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾವಿಸಿದ್ದಾರೆ.
 
ಕ್ರಿಕ್ ಇನ್ಫೋದ ಟಾಕಿಂಗ್ ಕ್ರಿಕೆಟ್ ಜತೆ ಮಾತನಾಡುತ್ತಿದ್ದ ದ್ರಾವಿಡ್ ಕಿರು ಓವರುಗಳ ಮಾದರಿ ಕ್ರಿಕೆಟ್ ಆಟಗಾರರ ಮೇಲೆ ಉಂಟುಮಾಡಿದ ಪರಿಣಾಮವನ್ನು ಕುರಿತು ಹೇಳಿದರು.
 
ಟಿ 20 ಕ್ರಿಕೆಟ್‌ನಲ್ಲಿ ಕಳೆದ 9, 10, 11 ವರ್ಷಗಳಲ್ಲಿ ಕೌಶಲ್ಯ ವೃದ್ಧಿಗೆ ಸಂಬಂಧಿಸಿದಂತೆ ಬ್ಯಾಟ್ಸ್‌ಮನ್‌ಗಳು ಬೌಲರುಗಳಿಗಿಂತ ಸ್ವಲ್ಪ ಮುಂದಿದ್ದಾರೆ. ಬೌಲರುಗಳು ನಿಧಾನವಾಗಿ ಸುಧಾರಿಸುತ್ತಿದ್ದಾರೆ ಎಂದು ದ್ರಾವಿಡ್ ನುಡಿದರು. 
 
ಬೌಲರುಗಳ ಆಟ ವಿಕಾಸ ಹೊಂದುತ್ತಿದ್ದಂತೆ ಎದುರಿಸಿದ ಅಡಚಣೆಗಳೇನು ಎಂದು ದ್ರಾವಿಡ್ ವಿವರಿಸಿದರು. ಬೌಲಿಂಗ್ ಸಹಜಗುಣ ಹೇಗಿರುತ್ತದೆಂದರೆ ನೀವು ದೈಹಿಕವಾಗಿ ಮಿತಿಯಲ್ಲಿರುತ್ತೀರಿ. ನೀವು 2 ಗಂಟೆಗಳು, ಎರಡೂವರೆ, ಮೂರು ಗಂಟೆಗಳ ಕಾಲ ಪ್ರತಿದಿನವೂ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನೀವು ಗಾಯಗೊಳ್ಳಬಹುದು ಅಥವಾ ದಣಿವಾಗಬಹುದು ಎಂದು ವಿವರಿಸಿದರು.
 
ಆದ್ದರಿಂದ ಕೌಶಲ್ಯ ವೃದ್ಧಿಗೆ ಬೌಲರುಗಳಿಗೆ ಅವಕಾಶಗಳು ದೈಹಿಕವಾಗಿ ಮಿತಿಯಲ್ಲಿರುತ್ತದೆ. ಆದರೆ ಬೌಲರುಗಳಿಗಿಂತ ಬ್ಯಾಟ್ಸ್‌ಮನ್‌ಗಳು ದೈಹಿಕವಾಗಿ ಹೆಚ್ಚು ಸಮಯ ಆಡಬಲ್ಲರು ಎಂದು ದ್ರಾವಿಡ್ ವಿವರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

 

ವೆಬ್ದುನಿಯಾವನ್ನು ಓದಿ