IND v/s SA test: ಬಾಕ್ಸಿಂಗ್ ಡೇ ಟೆಸ್ಟ್ ಗೆ ಹೇಗಿದೆ ತಯಾರಿ? ರೋಹಿತ್, ಕೊಹ್ಲಿ ರೆಡಿ

ಸೋಮವಾರ, 25 ಡಿಸೆಂಬರ್ 2023 (13:52 IST)
Photo Courtesy: Twitter
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭವಾಗಲಿದೆ.

ಸೌತ್ ಆಫ್ರಿಕಾದ ಸೆಂಚೂರಿಯನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಇಲ್ಲಿ ಬೀಡುಬಿಟ್ಟಿದ್ದು, ಅಭ್ಯಾಸ ನಡೆಸುತ್ತಿದೆ.

ಕೋಚ್ ರಾಹುಲ್ ದ್ರಾವಿಡ್ ಏಕದಿನ ಸರಣಿಗೆ ಗೈರಾಗಿದ್ದರು. ಇದೀಗ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ರೋಹಿತ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಮರಳಿ ತಂಡಕ್ಕೆ ಬಂದಿದ್ದಾರೆ.

ಇದೀಗ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ರೋಹಿತ್, ಕೊಹ್ಲಿ ಜೊತೆಗೆ ಶ್ರೇಯಸ್ ಅಯ್ಯರ್, ಗಿಲ್, ಜಡೇಜಾ ಸೇರಿದಂತೆ ಕ್ರಿಕೆಟಿಗರು ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿರುವ ದೃಶ್ಯವನ್ನು ಬಿಸಿಸಿಐ ಹಂಚಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ