ಟೆಸ್ಟ್ ಸರಣಿಗೆ ಮುನ್ನ ತಂಡಕ್ಕೆ ಸೇರ್ಪಡೆಯಾದ ವಿರಾಟ್ ಕೊಹ್ಲಿ: ಫ್ಯಾನ್ಸ್ ನಿಟ್ಟುಸಿರು
ಆಫ್ರಿಕಾ ಸರಣಿಗೆ ಕೆಲವೇ ದಿನ ಬಾಕಿಯಿರುವಾಗ ಕೌಟುಂಬಿಕ ಕಾರಣಗಳಿಗೆ ಕೊಹ್ಲಿ ತಂಡ ಬಿಟ್ಟು ತೆರಳಿದ್ದರು. ಆಗ ಅಭಿಮಾನಿಗಳಿಗೆ ಆತಂಕವಾಗಿತ್ತು. ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುತ್ತಾರೋ ಎಂದು ಅನುಮಾನ ಕಾಡಿತ್ತು.
ಆದರೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಎರಡು ದಿನ ಮುಂಚೆಯೇ ಕೊಹ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಅಂತೂ ಕೊಹ್ಲಿ ಮೊದಲ ಟೆಸ್ಟ್ ಆಡುವುದು ಖಚಿತವಾಗಿದೆ.
ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಟಾಪ್ ನಲ್ಲಿರಲು ಟೀಂ ಇಂಡಿಯಾ ಈ ಸರಣಿ ಗೆಲ್ಲಲೇಬೇಕಾಗಿದೆ. ಹೀಗಾಗಿ ಕೊಹ್ಲಿಯಂತಹ ಪ್ರಮುಖ ಆಟಗಾರರ ಉಪಸ್ಥಿತಿ ತಂಡಕ್ಕೆ ಮಹತ್ವದ್ದಾಗಿದೆ.