IND vs BAN Test: ರೋಹಿತ್ ಶರ್ಮಾಗೆ ವಯಸ್ಸಾಯ್ತು ಅನ್ನೋ ಹಾಗೇ ಇಲ್ಲ, ಫ್ಲೈಯಿಂಗ್ ಕ್ಯಾಚ್ ವಿಡಿಯೋ ನೋಡಿ

Krishnaveni K

ಸೋಮವಾರ, 30 ಸೆಪ್ಟಂಬರ್ 2024 (11:11 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂದು ರೋಹಿತ್ ಶರ್ಮಾ ಹಿಡಿದ ಫ್ಲೈಯಿಂಗ್ ಕ್ಯಾಚ್ ವೀಕ್ಷಕರನ್ನು ನಿಬ್ಬೆರಗಾಗಿಸಿದೆ.

ಮಳೆ ಬಿಡುವು ನೀಡಿದ್ದರಿಂದ ಇಂದು ನಾಲ್ಕನೇ ದಿನ ಕಾನ್ಪುರದಲ್ಲಿ ಪಂದ್ಯ ನಡೆಯುತ್ತಿದೆ. ಮೊದಲ ದಿನ 35 ಓವರ್ ಗಳ ಪಂದ್ಯ ಮಾತ್ರ ನಡೆದಿತ್ತು. ಬಳಿಕ ಎರಡು ದಿನ ಮಳೆಯಿಂದಾಗಿ ಒಂದೂ ಬಾಲ್ ಇಲ್ಲದೇ ದಿನದಾಟ ರದ್ದಾಗಿತ್ತು. ಆದರೆ ಇಂದು ಮಳೆ ಬಿಡುವು ನೀಡಿದ್ದು ಆಟ ಮುಂದುವರಿದಿದೆ.

ಇತ್ತೀಚೆಗಿನ ವರದಿ ಬಂದಾಗ ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ. ಮೊದಲ ದಿನ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತ್ತು. ಇಂದು ಬಾಂಗ್ಲಾದೇಶ ಎರಡು ವಿಕೆಟ್ ಕಳೆದುಕೊಂಡಿದೆ. ಅದರಲ್ಲೂ ಲಿಟನ್ ದಾಸ್ ನೀಡಿದ ಕ್ಯಾಚ್ ರನ್ನು ರೋಹಿತ್ ಶರ್ಮಾ ಹಿಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಲಿಟನ್ ದಾಸ್ ಹೊಡೆದ ಬಾಲ್ ನ್ನು ರೋಹಿತ್ ಹಾರಿ ಒಂದೇ ಕೈಯಿಂದ ಹಿಡಿದುಕೊಂಡಿದ್ದಾರೆ. ಸಾಮಾನ್ಯವಾಗಿ ಅವರನ್ನು ಫಿಟ್ನೆಸ್ ವಿಚಾರಕ್ಕೆ ಟ್ರೋಲ್ ಮಾಡಲಾಗುತ್ತದೆ. ಆದರೆ ಈ ಕ್ಯಾಚ್ ಮೂಲಕ ಅವರು ತಮ್ಮನ್ನು ಟ್ರೋಲ್ ಮಾಡುವವರಿಗೂ ತಕ್ಕ ಉತ್ತರ ಕೊಟ್ಟಂತಿದೆ.
 

Waata catch???? @ImRo45 #INDvsBAN pic.twitter.com/scYmOxynP7

— Vinothhhhhhh...???? (@VinoZ_28) September 30, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ