IND vs ENG test: ಇಂಗ್ಲೆಂಡ್ ಗೆ 399 ರನ್ ಗಳ ಗೆಲುವಿನ ಗುರಿ ನೀಡಿದ ಟೀಂ ಇಂಡಿಯಾ

Krishnaveni K

ಭಾನುವಾರ, 4 ಫೆಬ್ರವರಿ 2024 (15:45 IST)
ವಿಶಾಖಪಟ್ಟಣ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಎದುರಾಳಿಗೆ 399 ರನ್ ಗಳ ಗುರಿ ನಿಗದಿಪಡಿಸಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಶುಬ್ಮನ್ ಗಿಲ್ ಶತಕದ ನೆರವಿನಿಂದ ಟೀಂ ಇಂಡಿಯಾ 255 ರನ್ ಗಳಿಸಿ ಆಲೌಟ್ ಆಯಿತು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಉತ್ತಮ ಆಟವಾಡಿದ್ದರಿಂದ ತಂಡದ ಮೊತ್ತ 400 ರ ಗಡಿ ಸಮೀಪ ಬರಲು ಸಾಧ‍್ಯವಾಯಿತು. ಶುಬ್ಮನ್ ಗಿಲ್ 104 ರನ್ ಗಳಿಸಿ ಔಟಾದರು.

ಮತ್ತೊಮ್ಮೆ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದವರೆಂದರೆ ಶ್ರೇಯಸ್ ಅಯ್ಯರ್, ರಜತ್ ಪಟಿದಾರ್ ಮತ್ತು ವಿಕೆಟ್ ಕೀಪರ್ ಕೆಎಸ್ ಭರತ್. ಅಯ್ಯರ್ 29 ರನ್ ಗಳಿಸಿ, ರಜತ್ ಪಟಿದಾರ್ 9, ಕೆಎಸ್ ಭರತ್ 6 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಅನುಭವಿ ಆಲ್ ರೌಂಡರ್ ಅಶ್ವಿನ್ 29  ರನ್ ಗಳ ಕೊಡುಗೆ ನೀಡಿದರು.

ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲೀ 4, ರೆಹಾನ್ ಅಹ್ಮದ್ 3, ಜೇಮ್ಸ್ ಆಂಡರ್ಸನ್ 2, ಶೊಯೇಬ್ ಬಾಶಿರ್ 1 ವಿಕೆಟ್ ಕಬಳಿಸಿದರು. ಇದೀಗ ಮೊದಲ ಇನಿಂಗ್ಸ್ ಮುನ್ನಡೆಯೂ ಸೇರಿ ಭಾರತ ಒಟ್ಟು 398 ರನ್ ಗಳ ಮುನ್ನಡೆ ಸಾಧಿಸಿದೆ. ಇಂದು ಪಂದ್ಯದ ಮೂರನೇ ದಿನವಾಗಿದ್ದು, ಇಂಗ್ಲೆಂಡ್ ಗೆಲ್ಲಲು 399 ರನ್ ಗಳಿಸಬೇಕಿದೆ. ಸದ್ಯದ ಪರಿಸ್ಥಿತಿ ನೋಡಿದರೆ ನಾಳೆಯೇ ಪಂದ್ಯ ಮುಗಿಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ